LatestTop Storiesಜಿಲ್ಲಾ ಸುದ್ದಿಗಳು | District Newsದಾವಣಗೆರೆ-Davanagereಬೆಂಗಳೂರು-Bengaluru

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಚಿರತೆಗೆ ಕಾರು ಡಿಕ್ಕಿ – ತೀವ್ರ ಗಾಯಗೊಂಡು ನರಳಾಟ

ದಾವಣಗೆರೆ:ಹೆದ್ದಾರಿಯಲ್ಲಿ ತೀವ್ರ ಗಾಯಗೊಂಡು ನರಳುತ್ತಿರುವ ಚಿರತೆ.ದಾವಣಗೆರೆ ತಾಲೂಕಿನ ಆನಗೋಡ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಘಟನೆ ನಡೆದಿದೆ.ಹೆದ್ದಾರಿ ದಾಟುವಾಗ ವಾಹನ ಡಿಕ್ಕಿ ಹೊಡೆದಿದೆ.

ಗಾಯಗೊಂಡು ಹೆದ್ದಾರಿ ಪಕ್ಕದಲ್ಲಿ ನರಳುತ್ತ ಬಿದ್ದ ಚಿರತೆ. ತೀವ್ರ ನೋವಿನಿಂದ ಚಡಪಡಿಸುತ್ತಿರುವ ದೃಶ್ಯ ಕಂಡುಬಂದಿದೆ. ಎಡಗಣ್ಣು ಮತ್ತು ಸೊಂಟಕ್ಕೆ ತೀವ್ರ ಗಾಯವಾಗಿದೆ.

ಮಧ್ಯರಾತ್ರಿ ಹೆದ್ದಾರಿಯಲ್ಲಿ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಚಿರತೆ ಎಂದು ತಿಳಿದುಬಂದಿದೆ.ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದ ಸ್ಥಳೀಯರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಆಗಮನ.

ಬಿದ್ದು ನರಳಾಡುತ್ತಿರುವ ಚಿರತೆನೋಡಿ ಸ್ಥಳದಲ್ಲಿ ಜನಜಂಗುಳಿ ಸೇರಿದೆ. ಇದರಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಸ್ಥಗಿತ ಗೊಂಡಿತ್ತು.ಚಿರತೆ ಸ್ಥಳಾಂತರಕ್ಕೆ ಕ್ರಮ.ವೈದ್ಯರಿಗಾಗಿ ಕಾಯ್ದು ನಿಂತ ಸಿಬ್ಬಂದಿ.

20ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಚಿರತೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.ಘಟನಾ ಸ್ಥಳಕ್ಕೆ ಬಂದ ಅರವಳಿಕೆ ತಜ್ಞರು.ಹೊಸಪೇಟೆಯಿಂದ ಬಂದ ಅರವಳಿಕೆ ತಜ್ಞರಿಂದ ನಿರಂತರ ಪ್ರಯತ್ನ ನಡೆಯಿತು.

ಹೆದ್ದಾರಿ ಪಕ್ಕದ ಚರಂಡಿಯಲ್ಲಿ ಅವಿತು ಕುಳಿತ ಚಿರತೆ. ಭಯದಿಂದ ಚರಂಡಿ ಸೇರಿತ್ತು.ಚಿರತೆಗೆ ಅರವಳಿಕೆ ನೀಡುವಾಗ ಎಚ್ಚತ್ತುಕೊಂಡ ಚಿರತೆ.ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾಗಿದೆ. ಮತ್ತೆ ಜನ ಸೇರಿದ್ದನ್ನ ನೋಡಿ ಮತ್ತೆ ಸುಸ್ತಾಗಿ ಬಿದ್ದ ಚಿರತೆ.

ಬಳಿಕ ಹೊಸಪೇಟೆಯಿಂದ ಆಗಮಿಸಿದ ಅರವಳಿಕೆ ತಜ್ಞರು ಅರವಳಿಕೆ ನೀಡಿ ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ.ಗಾಯಗೊಂಡ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಶಿಫ್ಟ್ ಮಾಡಲಾಗಿದೆ.ಹಂಪಿ ಬಳಿಯ ಕಮಲಾಪುರ ಝೂಲಾಜಿಕಲ್ ಪಾರ್ಕ್ ಗೆ ಶಿಫ್ಟ್ ಮಾಡಲಾಗಿದೆ.

Share with Friends
author avatar
Digital Desk