
ಸ್ಟಿಂಗ್ ಆಪರೇಷನ್ : ಸಿಬಿಐ ತನಿಖೆಗೆ ಕುಮಾರಸ್ವಾಮಿ ಪಟ್ಟು
ಬೆಂಗಳೂರು ಅ.14 : ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್? ವಿಚಾರ ಕೋಲಾಹಲ ಎಬ್ಬಿಸಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್?ಡಿ ಕುಮಾರಸ್ವಾಮಿ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೂಡ ಈ ಬಗ್ಗೆ ಧ್ವನಿ ಎತ್ತುವಂತೆ ಆಗ್ರಹಿಸಿದ ಹೆಚ್?ಡಿಕೆ, ನಿವೃತ್ತ ಪೊಲೀಸರ ಟೀಮ್ ಕಟ್ಟಿ ಸ್ಟಿಂಗ್ ಅಪರೇಷನ್ ನಡೆಸಲಾಗ್ತಿದೆ.ಈ ಕುರಿತು ಸಿಬಿಐ ತನಿಖೆ ಆಗ್ಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸಚಿವರ ಮಾಹಿತಿ ತಿಳಿಯಲು ನಿವೃತ ಪೊಲೀಸರ ನೇಮಕ:
ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ಸದಾಶಿವನಗರದಲ್ಲಿ ನಾಲ್ವರು ನಿವೃತ್ತ ಪೊಲೀಸರನ್ನ ನೇಮಕ ಮಾಡಿಕೊಂಡಿದ್ದಾರೆ. ಕೇವಲ ಮಾಧ್ಯಮದವರನ್ನ ಮಾತ್ರ ಮಾಹಿತಿ ಪಡೆಯಲು ನೇಮಕ ಮಾಡ್ಕೊಂಡಿದ್ದಾರೆ ಎಂದು ಕೊಂಡಿದ್ದೆ. ಆದ್ರೆ ಇವರು ಹೊಸ ತಂತ್ರಜ್ಞಾನದ ಮೂಲಕ ನಾಲ್ಕು ಅಧಿಕಾರಿಗಳನ್ನ ಬಳಸಿಕೊಂಡು, ತಮ್ಮ ಸಂಪುಟ ಸಹೋದ್ಯೋಗಿಗಳು ಏನ್ ಚರ್ಚೆ ಮಾಡ್ತಾರೆ ಅನ್ನೋದನ್ನ ಪತ್ತೆ ಮಾಡುವ ಕೆಲಸ ಮಾಡ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯವರೇ ಮಾತಾಡಿದ್ದಾರೆ ಎಂದರು.
ಇದರ ಫಲವನ್ನ ನೀವೇ ಉಣ್ಣಲೇಬೇಕು:
ಶಿವಕುಮಾರ್ ಅವರೇ ಸ್ಟಿಂಗ್ ಆಪರೇಷನ್ಗೆ ನೀರೆರೆದು ಬೆಳೆಸಿದ್ರಿ, ಆ ಸಸಿ ಈಗ ಹೆಮ್ಮರವಾಗಿದೆ. ಅದರ ಫಲ ನೀವು ಉಣ್ಣಲೇಬೇಕು ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ರಮೇಶ್ ಜಾರಕಿಹೊಳಿ ಮೇಲೆ ಏನ್ ಏನ್ ನಡೆಸಿದ್ರಿ. ರಾಜಣ್ಣ 48 ಜನರದ್ದು ಇದೆ ಎಂದು ಸದನದಲ್ಲಿ ಹೇಳಿದ್ರು. ಈಗ ಮಾಜಿ ಸಿಎಂ ಸ್ಟೇ ತಕೊಂಡಿದ್ದಾರೆ. 8 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಈ ಗತಿಗೆ ತಂದಿದ್ದೀರಿ ಅಲ್ವಾ. ಇನ್ನು ನೀವು ದೇಶದಲ್ಲಿ ಏನ್ ಸಂದೇಶ ಕೊಡ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಸ್ಟಿಂಗ್ ಆಪರೇಷನ್ ಬಗ್ಗೆ ಸಿಬಿಐ ತನಿಖೆ ಆಗ್ಬೇಕು:
ರಾಜ್ಯದಲ್ಲಿ ನಡೆಯುತ್ತಿರೋ ಈ ಸ್ಟಿಂಗ್ ಆಪರೇಷನ್ ಬಗ್ಗೆ ಸಿಬಿಐ ತನಿಖೆ ಆಗ್ಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ರು. ಅಲ್ಲದೇ ತನಿಖೆ ಸಂಬಂಧ ಕೇಂದ್ರದ ಗೃಹ ಸಚಿವರನ್ನ ಸಹ ನಾನು ಭೇಟಿ ಮಾಡ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ ಎಲ್ಲ ಧರ್ಮದ ಬಗ್ಗೆ ಮಾತಾಡೋ ಡಿಕೆ ಶಿವಕುಮಾರ್ ಯಾರು ಅನ್ನೋದು ತನಿಖೆಯಲ್ಲಿ ಹೊರ ಬರಬೇಕು ಎಂದು ಕುಮಾರಸ್ವಾಮಿ ಗುಡುಗಿದರು.
ಸಿದ್ದರಾಮಯ್ಯ ಗಟ್ಟಿ ಧ್ವನಿಯಲ್ಲಿ ಮಾತಾಡಿ:
ಸಿದ್ದರಾಮಯ್ಯ ಅವರೇ ನಿಮ್ಮನ್ನ ಯಾವ ಪರಿಸ್ಥಿತಿಗೆ ತಂದಿದ್ದಾರೆ ನೋಡಿ. ನಮ್ಮ ಕುಟುಂಬ ಹಾಗೂ ನಾವು ಏನ್ ಅನುಭವಿಸಿದ್ದೇವೆ ಅಂತ ನಮಗೆ ಗೊತ್ತಿದೆ. ನಿಮ್ಮ ನೋವು ಸಹ ನಮಗೆ ಗೊತ್ತಾಗುತ್ತೆ. ನೀವು ಕೂಡ ತನಿಖೆ ಆಗ್ಬೇಕು ಎಂದಿದ್ದೀರಿ. ಸ್ಟಿಂಗ್ ಆಪರೇಷನ್? ನಿಲ್ಲಬೇಕು ಅಂದ್ರೆ ನೀವು ಧ್ವನಿ ಎತ್ತಬೇಕು. ಹೆದರಬೇಕಿಲ್ಲ, ಯಾಕೆ ಸ್ಟೇ ತರಬೇಕು. ಹೋರಾಟ ಮಾಡುವ ಶಕ್ತಿ ಇಲ್ಲವಾ? ಕೆಟ್ಟ ಪ್ರವೃತ್ತಿ ನಿಲ್ಲಿಸಬೇಕು ಅಂದ್ರೆ ಸಿದ್ದರಾಮಯ್ಯ ಅವರು ಗಟ್ಟಿ ಧ್ವನಿಯಲ್ಲಿ ಮಾತಾಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
