LatestTop Storiesಬೆಂಗಳೂರು-Bengaluru

ಸೌಜನ್ಯ ಕೊಲೆ ಪ್ರಕರಣ ಮರುತನಿಖೆ :ನಾಳೆ ಬೆಳ್ತಂಗಡಿಗೆ ಎಸ್‌ಐಟಿ ತಂಡ ಭೇಟಿ

ಬೆಂಗಳೂರು,ಅ.11 –ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಎಸ್‌ಐಟಿ ತಂಡ ನಾಳೆ ಬೆಳ್ತಂಗಡಿಗೆ ಭೇಟಿ ನೀಡಲಿದೆ.

ಎಸ್‌ಐಟಿ ರಚನೆಯಾದ ಬಳಿಕ ತಂಡವು ಎರಡನೇ ಬಾರಿಗೆ ಬೆಳ್ತಂಗಡಿಗೆ ಭೇಟಿ ನೀಡುತ್ತಿದ್ದು, ಸುಮಾರು ೨೦ ಸದಸ್ಯರ ತಂಡ ಸ್ಥಳದಲ್ಲಿ ಸಭೆ ನಡೆಸಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಡೆದ ತನಿಖೆಯ ಪ್ರಮುಖ ಅಂಶಗಳು, ನ್ಯಾಯಾಲಯದ ನಿರ್ದೇಶನಗಳು ಹಾಗೂ ಮುಂದಿನ ತನಿಖೆಯ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆಯುವ ಸಾಧ್ಯತೆಯಿದೆ.

ಇನ್ನು ನಿನ್ನೆ ಕೂಡ ಎಸ್‌ಐಟಿ ಮುಖ್ಯಸ್ಥರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ತನಿಖಾಧಿಕಾರಿ ಲೋಕೇಶ್ ಜಗಲಾಸರ್, ಎಸಿಪಿಗಳಾದ ರಾಮಚಂದ್ರ ಮತ್ತು ಮನೋಜ್ ಭಾಗವಹಿಸಿದ್ದರು.

ಸಭೆಯ ಬಳಿಕ ತನಿಖಾಧಿಕಾರಿಗಳು ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಅವರಿಗೆ ತನಿಖೆಗೆ ಸಂಬಂಧಿಸಿದ ಮಾಹಿತಿ ನೀಡಿದ್ದಾರೆ. ಮುಂದಿನ ತನಿಖೆಯನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯಬೇಕು ಎಂಬುದರ ಕುರಿತು ರೂಪುರೇಷೆಗಳನ್ನು ತಂಡವು ವಿವರಿಸಿದೆ.

ಒಟ್ಟಿನಲ್ಲಿ, ಸೌಜನ್ಯ ಪ್ರಕರಣದ ಮರುತನಿಖೆಯ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ಎಸ್‌ಐಟಿ ತಂಡದ ಬೆಳ್ತಂಗಡಿ ಭೇಟಿ ಮಹತ್ವ ಪಡೆದುಕೊಂಡಿದೆ.

Share with Friends
author avatar
Digital Desk