LatestTop Storiesಬೆಂಗಳೂರು-Bengaluru

600 ರೂ.ವಿಚಾರಕ್ಕೆ ಗಲಾಟೆ : ಕೋಳಿ ಮಂಜನ ಕೊಲೆ

ಬೆಂಗಳೂರು.ಅ.11- 6೦೦ ರೂಪಾಯಿ ವಿಚಾರಕ್ಕೆ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ವಿದ್ಯಾಪೀಠ ಸರ್ಕಲ್ ಬಳಿ ನಡೆದಿದೆ.

ಮಂಜ್ಯ ಅಲಿಯಾಸ್ ಕೋಳಿ ಮಂಜ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆರೋಪಿ ಪಳನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಮಂಜು ಮತ್ತು ಪಳನಿ ನಡುವೆ ನಿನ್ನೆ ರಾತ್ರಿ ಬಾರ್ ಬಳಿ ಆರಂಭವಾದ ಗಲಾಟೆ ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ.

ಕೊಲೆಯಾದ ಮಂಜ ನಗರದ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇನ್ನು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಿದ್ದ ಮಂಜು ಬಳಿ ಆರೋಪಿ ಪಳನಿ, ತನ್ನ ಮೊಬೈಲನ್ನ ಅಡಮಾನ ಇಟ್ಟಿದ್ದ. ಮದ್ಯಸೇವಿಸಲು ಹಣ ಬೇಕಿದ್ದ ಕಾರಣಕ್ಕೆ ಮೊಬೈಲ್ ಅಡವಿಟ್ಟು ದುಡ್ಡು ಪಡೆದಿದ್ದ.

ನಿನ್ನೆ ತಡರಾತ್ರಿ ಮೊಬೈಲ್ ವಾಪಾಸ್ ನೀಡುವಂತೆ ಮಂಜುಗೆ ಪಳನಿ ಧಮ್ಕಿ ಹಾಕಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಮಂಜನ ಮೇಲೆ ಅಟ್ಯಾಕ್ ಮಾಡಿದ್ದ. ದೊಣ್ಣೆಯಿಂದ ತಲೆಯ ಭಾಗಕ್ಕೆ ಪಳನಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಮಂಜು ಪ್ರಾಣಬಿಟ್ಟಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಸಿ.ಕೆ.ಅಚ್ಚಕಟ್ಟು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

Share with Friends
author avatar
Digital Desk