Crime NewsLatestಬೆಂಗಳೂರು-Bengaluruರಾಜ್ಯ-Karnataka

ಮೊದಲ ಬಾರಿಗೆ ಮಗನನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಬಂದ ರೇವಣ್ಣ

ಬೆಂಗಳೂರು: ಮೊದಲ ಬಾರಿಗೆ ಮಗ ಪ್ರಜ್ವಲ್‌ ರೇವಣ್ಣ (Prajwal Revanna) ಅವರನ್ನು ಭೇಟಿ ಮಾಡಲು ಮಾಜಿ ಸಚಿವ ರೇವಣ್ಣ (Revanna) ಪರಪ್ಪನ ಆಗ್ರಹಾರಕ್ಕೆ ಆಗಮಿಸಿದ್ದಾರೆ.

ಸೋಮವಾರವಷ್ಟೇ ಭವಾನಿ ರೇವಣ್ಣ (Bhavani Revanna) ಮಗ ಪ್ರಜ್ವಲ್‌ ರೇವಣ್ಣರನ್ನು ನೋಡಲು ಬಂದಿದ್ದರು. ಇದೀಗ ತಂದೆ ರೇವಣ್ಣ ಅವರು ಸಹ ಮಗನನ್ನು ನೋಡಲು ಆಗಮಿಸಿದ್ದಾರೆ. ಇದನ್ನೂ ಓದಿ: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಭೂಕುಸಿತ- ಮಣ್ಣಿನಡಿ ಸಿಲುಕಿದ ಕಾರ್ಮಿಕರು

https://youtu.be/xR2TApYcjYI?si=x_Wm6SWuy6_b8h_E

ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯಕ್ಕೆ ಪ್ರಜ್ವಲ್ (Prajwal Revanna) ಭೇಟಿಗೆ ಹೋಗಲ್ಲ. ನಾನು ಭೇಟಿಗೆ ಹೋದರೆ ರೇವಣ್ಣ ಏನೋ ಹೇಳಿಕೆ ಕೊಟ್ಟ ಅಂತಾ ಹೇಳುತ್ತಾರೆ. ಹೀಗಾಗಿ ನಾನು ಹೋಗಲ್ಲ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ಆಂಧ್ರದಲ್ಲಿ ಎಲ್ಲೇ ಹೋದರೂ ಸಹ ದರ್ಶನ್ ಪ್ರಕರಣ ಏನು ಅಂತ ನನ್ನನ್ನೇ ಕೇಳ್ತಾರೆ: ನಟ ಸಾಯಿಕುಮಾರ್

ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರು ಎಂದು ಮಾತು ಆರಂಭಿಸಿದ್ದ ಅವರು, ಸೋಮವಾರ ನನ್ನ ಪತ್ನಿ ಹೋಗಿದ್ದಾರೆ. ಮಗ ಅಲ್ವ ಹೀಗಾಗಿ ಹೋಗಿದ್ದಾರೆ ಅಷ್ಟೇ. ತಾಯಿ-ಮಗ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ, ಕೇಳಲೂ ಹೋಗಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ದೆಹಲಿಯ ಕರ್ನಾಟಕ ಭವನದ ಅಡುಗೆ ನೌಕರನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

https://youtu.be/JCrzNBZiNqk?si=2hLRmtIxb9rq0eaw

ಎಂತೆಂಥವರಿಗೋ ಕಷ್ಟ ಬರುತ್ತದೆ, ಅದ್ರಲ್ಲಿ ನಮ್ಮದು ಏನಿದೆ. ದೇವೇಗೌಡರು (HD Devegowda) ಒಂದು ತಿಂಗಳಿನಿಂದ ಸಹಜವಾಗಿ ನೋವಿನಲ್ಲೇ ಇದ್ದಾರೆ. ಎಲ್ಲದಕ್ಕೂ ಕಾಲದಲ್ಲಿ ಉತ್ತರ ಸಿಗುತ್ತದೆ. ನಾನು ಯಾವತ್ತೂ ಯಾವುದಕ್ಕೂ ಎದೆಗುಂದುವುದಿಲ್ಲ. 30 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಇಂಥವನೆಲ್ಲ ಬಹಳ ನೋಡಿದ್ದೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಪೌರ ಕಾರ್ಮಿಕರಿಗೆ ಗುಡ್ ನ್ಯೂಸ್- ವಾರಕ್ಕೆ ಒಂದು ದಿನ ರಜೆ ನೀಡಿದ ಸರ್ಕಾರ

Share with Friends
author avatar
News Desk