LatestTop Storiesರಾಜ್ಯ-Karnataka

ಪೌರ ಕಾರ್ಮಿಕರಿಗೆ ಗುಡ್ ನ್ಯೂಸ್- ವಾರಕ್ಕೆ ಒಂದು ದಿನ ರಜೆ ನೀಡಿದ ಸರ್ಕಾರ

ಬೆಂಗಳೂರು: ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ, ಪೌರ ಕಾರ್ಮಿಕರಿಗೆ ವಾರಕ್ಕೆ ಒಂದು ದಿನ ಪೂರ್ತಿ ರಜೆ ನೀಡಲಾಗಿದೆ.

ಈವರೆಗೆ ಪೌರಕಾರ್ಮಿಕರಿಗೆ ವಾರದಲ್ಲಿ ಎರಡು ಬಾರಿ ಅರ್ಧ ದಿನದ ರಜೆ ನೀಡಲಾಗುತ್ತಿತ್ತು. ಇದರಿಂದ ಪೌರಕಾರ್ಮಿಕರಿಗೆ ತೊಂದರೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ವಾರದ ಒಂದು ದಿನ ಸಂಪೂರ್ಣ ರಜೆ ನೀಡಬೇಕು ಎಂದು ಪೌರ ಕಾರ್ಮಿಕರು ಮನವಿ ಮಾಡಿದ್ದರು. ಇದನ್ನೂ ಓದಿ: ಸಿಲಿಕಾನ್‌ ಸಿಟಿಯಲ್ಲಿ ಬೆಳ್ಳಂ ಬೆಳಗ್ಗೆ ಕೂಲ್ ಕೂಲ್ ವಾತಾವರಣ

https://youtu.be/b03YHoA-9aw?si=5-vsXZ3S5t6852Pa

ಇದೀಗ ನಗರಾಭಿವೃದ್ಧಿ ಇಲಾಖೆ ಪೌರ ಕಾರ್ಮಿಕರ ಮನವಿಗೆ ಸ್ಪಂದಿಸಿದ್ದು, ನಿತ್ಯದ ಕೆಲಸಕ್ಕೆ ತೊಂದರೆ ಆಗದಂತೆ ಇಡೀ ದಿನದ ರಜೆ ನೀಡಲು ಆದೇಶಿಸಿದೆ. ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲಿ ವೈಟ್‌ ಟಾಪಿಂಗ್‌ಗೆ ಬಿಬಿಎಂಪಿ ಸಿದ್ಧತೆ

Share with Friends
author avatar
News Desk