
ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಶಾಸಕರ ಕಚೇರಿ ಮುಂದೆ ಪ್ರತಿಭಟನೆ..!
ರಾಯಚೂರು ಸೆ 27 – ರಾಜ್ಯ ಸರಕಾರ ಆದಿಸೂಚನೆಯಂತೆ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮತಿ ಮುಖಂಡರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರ ಕಾರ್ಯಾಲಯ ಮುಂದೆ ಪ್ರತಿಭಟನೆ ನಡೆಸಿದರು.
ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಮಾಡದಂತೆ ಆಗ್ರಹ ನಡೆಸಿದ್ದಾರೆ. ಪರಿಷ್ಕೃತ ಕನಿಷ್ಟ ವೇತನ ತಡೆ ಹಿಡಿದು, ಸಮಿತಿ ರಚನೆ ಮಾಡಿರುವುದನ್ನು ಖಂಡಿಸಿ, ಕೂಡಲೇ ಕನಿಷ್ಠ ವೇತನ ಜಾರಿಗೊಳಿಸಬೇಕು.
ಪ್ಲಾಂಟೇಷನ್, ಬೀಡಿ, ಗಾರ್ಮೆಂಟ್ಸ್, ಹಮಾಲಿ ಕಾರ್ಮಿಕರನ್ನು ಹೊಸ ಕನಿಷ್ಠ ವೇತನ ಅಧಿಸೂಚನೆಯಲ್ಲಿ ಸೇರಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಒತ್ತು ನೀಡಬೇಕು.ಸ್ತ್ರೀಂ ನೌಕರರ ಖಾಯಂಮಾತಿ ಮತ್ತು ಕನಿಷ್ಟ ವೇತನ ವ್ಯಾಪ್ತಿಗೆ ತರಬೇಕು.
ತರುವ ತನಕ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಿಕ್ಕೆ ಬರುವಾಗ ಕೊಟ್ಟಿರುವ ಆಶ್ವಾಸನೆಯಂತೆ ಬಿಸಿಯೂಟದವರಿಗೆ 7 ಸಾವಿರ, ಆಶಾದವರಿಗೆ 10 ಸಾವಿರ, ಅಂಗನವಾಡಿ ನೌಕರರಿಗೆ 15 ಸಾವಿರ ಬಾಕಿ ನೀಡಬೇಕು.
ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿ ರದ್ದು ಮಾಡಿ ಹಾಗೂ ಖಾಯಂಗೊಳಿಲು ಅಗತ್ಯವಾದ ಕನ್ನಮೆಂಟ್ ಸ್ಟೇಟಸ್ ಕಾಯಿದೆ ಜಾರಿಗೆ ತನ್ನಿ ಮತ್ತು ಸರ್ಕಾರದಡಿ ದುಡಿಯುವ ನೌಕರರಿಗೆ ಕೆಸಿ ಎಸ್ ಆರ್ ನಿಯಮ ತಿದ್ದುಪಡಿ ಮಾಡಬೇಕು.
ESI ಹಾಗೂ PF ಗ್ರಾಚ್ಯುಟಿ, ಬೋನಸ್ ಸೌಲಭ್ಯಗಳನ್ನು ಪಡೆಯಲು ಇರುವ ಮಿತಿಗಳನ್ನು ರದ್ದುಗೊಳಿಸಬೇಕು.ರೈತರ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಮತ್ತು ರೈತ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಂಬಲ ಬೆಲೆ ನಿಗದಿಪಡಿಸಬೇಕು.ಆಹಾರ, ಆರೋಗ್ಯ, ಶಿಕ್ಷಣದ ಸೇವೆಗಳ ಗುಣಮಟ್ಟ ಹೆಚ್ಚಿಸಿ ಮತ್ತು ಈ ಸೇವೆಗಳ ಖಾಸಗೀಕರಣ ನಿಲ್ಲಿಸಬೇಕು.ವಿದ್ಯುತ್, ಸಾರಿಗೆ ಸಂಸ್ಥೆಗಳನ್ನೊಳಗೊಂಡು ಯಾವುದೇ ಸಾರ್ವಜನಿಕ ಕೈಗಾರಿಕೆಗಳ ಖಾಸಗೀಕರಣ ಮಾಡಬಾರದು.
