ಕೆಡಿಪಿ ಸಭೆಯಲ್ಲಿ ನಿದ್ದೆ ಮಾಡಿ ಸುದ್ದಿಯಾದ ಎಂಎಲ್‌ಸಿ ವಸಂತ ಕುಮಾರ್
ರಾಯಚೂರು: ಜಿಲ್ಲಾ ಪಂಚಾಯತ್ (Zila Panchayat) ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನೂತನ ವಿಧಾನಪರಿಷತ್ ಸದಸ್ಯ ವಸಂತ್ ಕುಮಾರ್ (Vasanath Kumar) ಭರ್ಜರಿ ನಿದ್ದೆ ಮಾಡಿ ಸುದ್ದಿಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಅಧಿಕಾರಿಗಳ ಸಭೆಯಲ್ಲಿ ಮುಂದಿನ ಸಾಲಿನಲ್ಲೇ ಕುಳಿತಿದ್ದ ನೂತನ ಕಾಂಗ್ರೆಸ್ ಪರಿಷತ್ ಸದಸ್ಯ (Congress MLC) ಎ.ವಸಂತ ಕುಮಾರ್ ಕೆಲಕಾಲ ನಿದ್ದೆಗೆ ಜಾರಿ ಸುದ್ದಿಯಾದ್ದರೆ. ಇದನ್ನೂ ಓದಿ: ಸೈನಿಕರೊಂದಿಗೆ ಯೋಗ ಪ್ರದರ್ಶಿಸಿದ ಶ್ವಾನಗಳು- ವೀಡಿಯೋ ವೈರಲ್
ಕುಡಿಯುವ ನೀರಿನ ಸಮಸ್ಯೆ, ಅತಿವೃಷ್ಟಿ, ಬೀಜ ಮತ್ತು ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗ ಎ.ವಸಂತ ಕುಮಾರ್ ಸಭೆಯನ್ನೇ ಮರೆತುಬಿಟ್ಟು ಸಭೆಯಲ್ಲಿ ನಿದ್ದೆ ಮಾಡಿದ್ದಾರೆ. ಸಭೆಯಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ, ಡಾ.ಶಿವರಾಜ್ ಪಾಟೀಲ್, ಹಂಪಯ್ಯ ನಾಯಕ್, ಸಂಸದ ಜಿ.ಕುಮಾರ್ ನಾಯಕ್ ಸೇರಿ ಹಲವರು ಭಾಗವಹಿಸಿದ್ದರು. ಇದನ್ನೂ ಓದಿ: ಮಲಯಾಳಂ ನಿರ್ದೇಶಕ ವೇಣುಗೋಪನ್ ನಿಧನ
ಬಿತ್ತನೆ ಬೀಜ, ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಕೈದಿಯಾಗಿ ದಿನ ಕಳೆದ ಪವಿತ್ರಾಗೌಡ!
