Latestರಾಷ್ಟ್ರೀಯ-National

ಸೈನಿಕರೊಂದಿಗೆ ಯೋಗ ಪ್ರದರ್ಶಿಸಿದ ಶ್ವಾನಗಳು- ವೀಡಿಯೋ ವೈರಲ್‌

ಶ್ರೀನಗರ: ಜಮ್ಮುವಿನ ಇಂಡೋ-ಪಾಕ್ (Indo-Pak) ಗಡಿ ನಿಯಂತ್ರಣ ರೇಖೆಯ (LOC) ಬಳಿ ಸೈನಿಕರೊಂದಿಗೆ, ಎರಡು ಶ್ವಾನಗಳು (Army Dogs) ಯೋಗಾಸನದಲ್ಲಿ ಪಾಲ್ಗೊಂಡಿರುವ ವೀಡಿಯೋವನ್ನು ಭದ್ರತಾ ಪಡೆ (Army) ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ವೀಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ ಸಶಸ್ತ್ರ ಪಡೆಗಳ ಭಾಗವಾಗಿರುವ ಶ್ವಾನಗಳು, ಸೈನಿಕರು ಯೋಗ ಮಾಡುವುದನ್ನು ಅವುಗಳು ಸಹ ಯೋಗ ಮ್ಯಾಟ್ ಮೇಲೆ ಅನುಸರಿಸಿವೆ. ವೀಡಿಯೋದಲ್ಲಿ ಎರಡು ಲ್ಯಾಬ್ರಡಾರ್ ಶ್ವಾನಗಳು ಮುಂಭಾಗದ ಸೈನಿಕರ ಸಾಲಿನಲ್ಲಿ ತರಬೇತುದಾರರ ಸೂಚನೆಗಳನ್ನು ಅನುಸರಿಸಿವೆ. ಇದನ್ನೂ ಓದಿ: ಮಲಯಾಳಂ ನಿರ್ದೇಶಕ ವೇಣುಗೋಪನ್ ನಿಧನ

ಸಾಮಾನ್ಯವಾಗಿ ಗಸ್ತು, ಟ್ರ್ಯಾಕಿಂಗ್, ರಕ್ಷಣಾ ಕಾರ್ಯಾಚರಣೆ ಹಾಗೂ ಸ್ಫೋಟಕಗಳ ಪತ್ತೆಯಂತಹ ಕಾರ್ಯಗಳನ್ನು ನಿರ್ವಹಿಸುವ ಶ್ವಾನಗಳು ಇಂದು ಯೋಗ ಮ್ಯಾಟ್‍ನಲ್ಲಿ ತಮ್ಮ ಚಾಣಾಕ್ಷತೆಯನ್ನು ತೋರಿಸಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೇ ಸೈನಿಕರು ಯೋಗ ಭಂಗಿಗಳನ್ನು ಬದಲಿಸಿದಂತೆ ಅವುಗಳು ಸಹ ಅನುಕರಿಸಿವೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಕೈದಿಯಾಗಿ ದಿನ ಕಳೆದ ಪವಿತ್ರಾಗೌಡ!

https://youtu.be/xoOfBEbx3fE?si=pA6poiTPXvJopN_k

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್‍ಎಫ್) ಬಿಡುಗಡೆ ಮಾಡಿದ ಮತ್ತೊಂದು ವೀಡಿಯೋದಲ್ಲಿ, ಶ್ವಾನವಾದ ಜಿಮ್ಮಿ, ಪಡೆಯ 13ನೇ ಬೆಟಾಲಿಯನ್‍ನೊಂದಿಗೆ ಯೋಗ ಪ್ರದರ್ಶಿದೆ. ಈ ವೇಳೆ ತನ್ನದೇ ಆದ ಯೋಗದ ಮ್ಯಾಟ್ ಮೇಲೆ ಕುಳಿತು, ತರಬೇತುದಾರರ ಸೂಚನೆಯಂತೆ ಜಿಮ್ಮಿ ಯೋಗ ಪ್ರದರ್ಶನ ಮಾಡಿದೆ. ಇದನ್ನೂ ಓದಿ: ದರ್ಶನ್ ಕೊಲೆ ಮಾಡೋ ವ್ಯಕ್ತಿ ಅಲ್ಲ : ಮದ್ದೂರು ಎಂಎಲ್‌ಎ

Share with Friends
author avatar
News Desk