BlogLatestTop Storiesಬೆಂಗಳೂರು-Bengaluru

ಗ್ಯಾಸ್ ಸಿಲಿಂಡರ್‌ನಲ್ಲಿ ಬೆಂಕಿ : ನಾಗಪಂಚಮಿ ದಿನದಂದು ತಪ್ಪಿದ ಭಾರಿ ಅನಾಹುತ

ಬೆಂಗಳೂರು : ಬೆಂಗಳೂರು ನಗರ ಪಾಲಿಕೆ ಕೇಂದ್ರ ಕಛೇರಿ ಆದಿಶಕ್ತಿ ದೇವಾಲಯದಲ್ಲಿ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಗ್ಯಾಸ್ ಲೀಕ್ ಆಗಿ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಎಚ್ಚರ ತಪ್ಪಿದ್ರೆ ಪಾಲಿಕೆ ಕೇಂದ್ರ ಕಛೇರಿಯಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅಡುಗೆ ಭಟ್ಟರ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ.

ದೇವಳದಲ್ಲಿ ವಿಶೇಷ ಪ್ರಸಾದ ತಯಾರಿಸುವಾಗ ಈ ಘಟನೆ ನಡೆದಿದ್ದು ಸಿಲಿಂಡರ್ಗೆ ಗೋಣಿ ಚೀಲದಿಂದ ಮುಚ್ಚಿ ಬೆಂಕಿ ಯನ್ನು ಸಿಬ್ಬಂದಿಗಳು ನಂದಿಸಿದ್ದಾರೆ. ನಾಗರಪಂಚಮಿ ಹಿನ್ನಲೆ ದೇವಸ್ಥಾನದಲ್ಲಿ ಇದ್ದ ನೂರಾರು ಮಂದಿ ಸೇರಿದ್ದರು.ಅಡುಗೆ ಭಟ್ಟರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.

Share with Friends
author avatar
News Desk