BlogTop StoriesVideosಬೆಂಗಳೂರು-Bengaluru

ಬಿಬಿಎಂಪಿ ವ್ಯಾಪ್ತಿಯ ಆಸ್ತಿ ತೆರಿಗೆದಾರರಿಗೆ ಗುಡ್ ನ್ಯೂಸ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಸ್ತಿ ಮಾಲ ಕರು ಬಾಕಿ ಉಳಿಸಿಕೊಂ ಡಿರುವ ಆಸ್ತಿ ತೆರಿಗೆಯನ್ನು ದಂ ಡ ಹಾಗೂ ಬಡ್ಡಿ ಇಲ್ಲದೆ ಪಾವತಿಸುವ ಒಂದು ಬಾರಿ ಪರಿಹಾರ (ಒಟಿಎಸ್)ಯೋಜನೆಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಸರ್ಕಾರ ಆದೇ ಶಹೊರಡಿಸಿದೆ.

ಫೆಬ್ರುವರಿಯಲ್ಲಿ ಜಾರಿಯಾಗಿದ್ದ ಒಟಿಎಸ್ಯೋ ಜನೆ ಜುಲೈ 31ರಂ ದು ಕೊನೆಗೊಂಡಿತ್ತು. ಇನ್ನಷ್ಟು ಕಾಲಾವಕಾಶ ನೀಡಬೇ ಕು ಎ ದು ನಾಗರಿಕರು, ಸಂಘ–ಸಂಸ್ಥೆಗಳು ಮನವಿಮಾಡಿಕೊಂ ಡಿದ್ದವು.ಅದರಂತೆಯೇ , ಸರ್ಕಾರ ಒಟಿಎಸ್ ಅವಧಿಯನ್ನು ಎರಡು ತಿಂಗಳು ವಿಸ್ತರಿಸಿದೆ.

ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಸೂಚನೆಯಂತೆ ಸೆಪ್ಟೆಂಬರ್ 30 ಅಂದರೆ ಎರಡು ತಿಂಗಳು ಆಸ್ತಿ ತೆರಿಗೆ ಬಾಕಿ ಪಾವತಿಗೆ ಬಿಬಿಎಂಪಿ ಅವಕಾಶ ನೀಡಿದೆ.

ಇನ್ನು ಸಂಪೂರ್ಣ ಬಡ್ಡಿ ಮನ್ನಾ, ಜೊತೆಗೆ ದಂಡದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗಿದೆ. ಜುಲೈ ತಿಂಗಳ ಅಂತ್ಯದ ವೇಳೆಗೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ದಾಖಲೆಯ 3,200 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸಿದೆ.

Share with Friends
author avatar
News Desk