BlogLatestರಾಜ್ಯ-Karnatakaಹಾವೇರಿ-Haveri

ಶಿಗ್ಗಾಂವಿ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ಕು ಮಂದಿ ದಾರುಣ ಸಾವು

ಶಿಗ್ಗಾಂವಿ: ಇಲ್ಲಿನ ತಡಸ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಾಪುರ ಬಳಿ‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಸೆಂಬರ್‌ 25ರಂದು ಬುಧವಾರ ಸಂಭವಿಸಿದ ಜೀಪ್ ಮತ್ತು ಕಾರ್ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ನಿಯಂತ್ರಣ ಟಾಪಿಪಿ ಕಾರು ಡಿವೈಡರ್ ದಾಟಿ ಎದುರಿಗೆ ಬರುತ್ತಿದ್ದ 3 ಕಾರುಗಳಿಗೆ ಡಿಕ್ಕಿಯಾಗಿದೆ. ಒಂದು ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಉಳಿದ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ.

ಭೀಕರ ದುರಂತದಲ್ಲಿ ಬೆಂಗಳೂರು ಚಾಮರಾಜಪೇಟೆ ನಿವಾಸಿ ಚಂದ್ರಮ್ಮ (59) ಹರಿಹರದ ಮೀನಾ (38), ಮಹೇಶ್ ಕುಮಾರ್ ಸಿ (41) ಹಾಗೂ ಧನವೀರ (11) ಮೃತ ದುರ್ದೈವಿಗಳು.

ಮೃತ ನಾಲ್ವರು ಟಾಟಾ ಆಲ್ಟೋ ಕಾರಿನಲ್ಲಿ ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 48ರ ತಿಮ್ಮಾಪುರ ಬಳಿ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಮಹೀಂದ್ರ ಕಾರು ಡಿಕ್ಕಿಯಾಗಿದೆ.

ಮಹಿಂದ್ರಾ ಕಾರು ರಸ್ತೆಯ ಡಿವೈಡರ್ ದಾಟಿ ಎದುರಿಗೆ ಬರ್ತಿದ್ದ ಟಾಟಾ ಆಲ್ಟೋ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ನಂತರ ಮಹಿಂದ್ರಾ ಕಾರಿನಲ್ಲಿದ್ದವರು ಪರಾರಿ ಆಗಿದ್ದಾರೆ. ಅಪಘಾತ ಮಾಡಿದ ಮಹಿಂದ್ರಾ ಕಾರು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸೇರಿದ್ದು ಎಂಬ ಮಾಹಿತಿ ಸಿಕ್ಕಿದೆ.

ಎಸ್‌ಪಿ ಅಂಶುಕುಮಾರ ಹಾಗೂ ತಡಸ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತಡಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share with Friends
author avatar
News Desk