Crime NewsLatestಬೆಂಗಳೂರು-Bengaluruರಾಜ್ಯ-Karnataka

ಬಡ್ಡಿ ಹಣಕ್ಕಾಗಿ ವ್ಯಕ್ತಿಯ ಭೀಕರ ಹತ್ಯೆ

ಬೆಂಗಳೂರು: ವ್ಯಕ್ತಿಯೋರ್ವನನ್ನು ಬಡ್ಡಿ ಹಣಕ್ಕಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಕಾಕ್ಸ್‌ಟೌನ್ ದೊಡ್ಡಗುಂಟೆ (Doddagunte) ಬಳಿ ನಡೆದಿದೆ.

ಅಜಿತ್ (35) ಕೊಲೆಯಾದ ವ್ಯಕ್ತಿ. ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಮನೆ ಮುಂಭಾಗದಲ್ಲೇ ಕೊಲೆ ಮಾಡಲಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಕನ್ನಡಿಗ ಯೋಧ ಹುತಾತ್ಮ

https://youtu.be/JCrzNBZiNqk?si=8zmmG1T7Jvfjc_nT

ಅಜಿತ್ ವ್ಯಕ್ತಿಯೊಬ್ಬರಿಂದ ಅಧಿಕ ಬಡ್ಡಿಗೆ ಹಣ ಪಡೆದಿದ್ದರು. ಬಡ್ಡಿ ಹಣ ಮತ್ತು ಅಸಲು ಹಣ ವಾಪಸ್ ವಿಚಾರಕ್ಕೆ ಆರೋಪಿ ಮತ್ತು ಅಜಿತ್ ನಡುವೆ ಗಲಾಟೆ ಆಗುತ್ತಿತ್ತು. ಇಂದು ಅಜಿತ್ ಮನೆಗೆ ಬರೋದನ್ನೇ ಕಾದು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ.

https://youtu.be/JCrzNBZiNqk?si=XFERA3n1R0IwM7JV

ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದಿಂದ ಬಂದು ಆರೋಪಿ ಕೃತ್ಯವೆಸಗಿದ್ದು, ಆರೋಪಿ ಪತ್ತೆಗಾಗಿ ಪುಲಿಕೇಶಿ ನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಭರ್ಜರಿ ವರದಕ್ಷಿಣೆ ಕೊಟ್ಟರೂ ಮಗಳ ಹತ್ಯೆ -ಪೋಷಕರ ಆರೋಪ

Share with Friends
author avatar
News Desk