Blogಕೋಲಾರ-Kolaraರಾಜ್ಯ-Karnataka

ಸಮುದ್ರದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ

ಕೋಲಾರ : ಶಾಲಾ ಪ್ರವಾಸಕ್ಕೆ ಹೋಗಿದ್ದ ಕೋಲಾರ ಜಿಲ್ಲೆಯ, ಮುಳಬಾಗಿಲು ತಾಲೂಕು, ಬಾಳಸಂದ್ರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿಧ್ಯಾರ್ಥಿನಿಯರು ಮುರುಡೇಶ್ವರ ಸಮುದ್ರ ದಡದಲ್ಲಿ ಆಡುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ 4 ಜನ ವಿದ್ಯಾರ್ಥಿನಿಯರು ಕೊಚ್ಚಿ ಹೋಗಿದ್ದು ಇವರಲ್ಲಿ ಸಿಕ್ಕಿರುವ (ಮೃತದೇಹ) ಶ್ರಾವಂತಿ ನಮ್ಮೂರು ಮುಳಬಾಗಿಲು ತಾಲೂಕು (ಪೂಜಾರಹಳ್ಳಿ) ಗ್ರಾಮದವರು.

ನಮ್ಮ ಮನೆ ಪಕ್ಕದ ಬಾಲಕಿ, ಶ್ರಾವಂತಿ ಆಗಲಿಕೆಯ ಸುದ್ದಿ ತಿಳಿದು ಇಡೀ ಗ್ರಾಮದ ಜನರೆಲ್ಲ ದುಃಖದಲ್ಲಿ ಮುಳುಗಿದ್ದೇವೆ. ನಮ್ಮ ಕಣ್ಣು ಮುಂದೆ ಆಡಿ ಬೆಳೆದ ಹದಿಹರೆಯದ ಬಾಲಕಿ 9 ನೇ ತರಗತಿ ವ್ಯಾಸಂಗ ಮಾಡುತಿದ್ದಳು. ಪರಿಶಿಷ್ಠ ಪಂಗಡದ ಸಮುದಾಯಕ್ಕೆ ಸೇರಿದ ಮೃತ ಬಾಲಕಿಯ ಶ್ರಾವಂತಿ ಕುಟುಂಬ ಕಡುಬಡತನದ ಹಿನ್ನೆಲೆಯದ್ದು.

ಮೃತ ಬಾಲಕಿ ತಂದೆ ಗೋಪಾಲ್, ತಾಯಿ ಸುಲೋಚನಾ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಸಂತ್ರಸ್ತ ದಂಪತಿಗಳಿಗೆ ಒಟ್ಟು ಮೂರು (ಇಬ್ಬರು ಹೆಣ್ಣು , ಒಂದು ಗಂಡು) ಜನ ಮಕ್ಕಳಿದ್ದು ದೊಡ್ಡ ಮಗಳಾದ ಶ್ರಾವಂತಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾಳೆ.

ಈ ತಂದೆ ತಾಯಿಗಳ ದುಃಖದಲ್ಲಿ ನಾವೆಲ್ಲರೂ ಭಾಗಿದಾರರಾಗಿದ್ದೇವೆ.ಈ ದುರ್ಘಟನೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಿನ್ಸಿಪಾಲ್ ಶಶಿಕಲಾ ರವರು ಹಾಗೂ ಶಿಕ್ಷಕರು ಮತ್ತು ಮುರುಡೇಶ್ವರ ಪ್ರವಾಸೋದ್ಯಮ ಇಲಾಖೆಯೇ ನೇರ ಕಾರಣ. ಆದ್ದರಿಂದ ಸಮುದ್ರ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿರುವ ಉಳಿದ ಮೂರು ಜನ ವಿದ್ಯಾರ್ಥಿನಿಯರಿಗಾಗಿ ಶೀಘ್ರವಾಗಿ ಶೋಧಕಾರ್ಯ ನಡೆಸಬೇಕು ಸರ್ಕಾರ ಮೃತ ಬಾಲಕಿಯರ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ ಪರಿಹಾರ, 2 ಎಕರೆ ಭೂಮಿ ಮಂಜೂರಾತಿ, ಮೃತ ಕುಟುಂಬದ ಸದಸ್ಯರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ ಮುಂತಾದ ಸೂಕ್ತ ಪರಿಹಾರ ಕಲ್ಪಿಸಬೇಕು. ನಿರ್ಲಕ್ಷ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು.ಅಂತ Sfi ವಾಡುದೇವರೆಡ್ಡಿ ಹಾಗೂ ದಲಿತ ಮುಖಂಡರು ಹಾಗೂ ಪೋಷಕರು ತಿಳಿಸಿದರು

ವರದಿ..ಅರುಣ್ ಕುಮಾರ್ ಬಿ ಎಸ್

Share with Friends
author avatar
News Desk