BlogLatestರಾಜ್ಯ-Karnataka

ಜಮೀನಿನಲ್ಲಿ ಬೆಳೆದಿದ್ದ 92 ಸಾವಿರ ಮೌಲ್ಯದ ಗಾಂಜಾಸೊಪ್ಪು ಜಪ್ತಿ

ದೊಡ್ಡಬಳ್ಳಾಪುರ : ತಾಲೂಕಿನ ತೂಬಗೆರೆ ಹೋಬಳಿ ಗೆದ್ದಲ ಪಾಳ್ಯದ ಹೊರವಲಯದಲ್ಲಿನ ಜಮೀನಿನ ಮೇಲೆ ಇನ್ಸೆಪೆಕ್ಟರ್‌ ಸಾದಿಕ್‌ಪಾಷಾ ನೇತೃತ್ವದಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿ, ಸುಮಾರು 92 ಸಾವಿರ ರೂ. ಮೌಲ್ಯದ 8 ಕೆಜಿ 700 ಗ್ರಾಂ ತೂಕದ ಹಸಿ ಗಾಂಜಾ ಸೊಪ್ಪಿನ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗಷ್ಟೇ ದೊಡ್ಡಬೆಳವಂಗಲ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಯ ಬಂಧನದ ಬೆನ್ನಲ್ಲೇ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕಾರ್ಯಚರಣೆ ನಡೆಸಿ, ಗೆದ್ದಲಪಾಳ್ಯದ ಹೊರವಲಯದಲ್ಲಿ ಗಾಂಜಾ ಸೊಪ್ಪು ಬೆಳೆಯಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿದೆ.

ನಾರಾಯಣಸ್ವಾಮಿ ತನ್ನ ಜಮೀನಿನಲ್ಲಿ ಬೆಳೆಯಲಾಗಿದ್ದ ತೊಗರಿ, ಅವರೆ, ಅಳಸಂದೆ, ರಾಗಿ ಜೊತೆಗೆ ಅಕ್ರಮವಾಗಿ, ಸಾಲಾಗಿ ಗಾಂಜ ಗಿಡಗಳನ್ನು ಬೆಳೆಸಿರುವುದನ್ನು ಪೊಲೀಸರು ಪತ್ತೆ ಹಚ್ಚಿ ದಾಳಿ ಮಾಡಿದ್ದಾರೆ.

ಆರೋಪಿ ನಾರಾಯಣ ಸ್ವಾಮಿಯನ್ನು ಬಂಧಿಸಿರುವ ಪೊಲೀಸರು ಸುಮಾರು 92 ಸಾವಿರ ರೂ. ಮೌಲ್ಯದ 8 ಕೆಜಿ 700 ಗ್ರಾಂ ತೂಕದ ಒಟ್ಟು 568 ಗಾಂಜಾ ಸೊಪ್ಪಿನ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇನ್‌್ಸಪೆಕ್ಟರ್‌ ಸಾದಿಕ್‌ ಪಾಷಾ ತಿಳಿಸಿದ್ದಾರೆ.ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share with Friends
author avatar
News Desk