BlogLatestTop Storiesರಾಜ್ಯ-Karnataka

ಬಾಂಗ್ಲಾ ಪ್ರವಾಹಕ್ಕೆ ಭಾರತ ಕಾರಣ ಎಂಬ ಆರೋಪಕ್ಕೆ ಸರ್ಕಾರದಿಂದ ಸ್ಪಷ್ಟನೆ

ನವದೆಹಲಿ: ಭಾರತವು ‘ಬಾಂಗ್ಲಾದೇಶ ವಿರೋಧಿ ನೀತಿ’ ಅನುಸರಿಸಿ ಡ್ಯಾಂನಿಂದ ದಿಢೀರನೆ ನೀರು ಬಿಟ್ಟಿದ್ದರಿಂದ ಬಾಂಗ್ಲಾದೇಶ ಪ್ರವಾಹದಲ್ಲಿ ಮುಳುಗುತ್ತಿದೆ ಎಂದು ಬಾಂಗ್ಲಾದೇಶ ಆರೋಪಿಸಿದೆ. ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯ ನಂತರ ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಿ ತೀವ್ರ ಪ್ರವಾಹವು ಹಾನಿಯನ್ನುಂಟುಮಾಡಿದೆ. ಬೃಹತ್ ವಿನಾಶದ ಮಧ್ಯೆ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಸಲಹೆಗಾರ ಮೊಹಮ್ಮದ್ ನಹಿದ್ ಇಸ್ಲಾಂ, “ಯಾವುದೇ ಪೂರ್ವ ಎಚ್ಚರಿಕೆಯಿಲ್ಲದೆ” ತ್ರಿಪುರಾ ಅಣೆಕಟ್ಟಿನ ಸ್ಲೂಸ್ ಗೇಟ್‌ಗಳನ್ನು ತೆರೆದಿದ್ದಕ್ಕಾಗಿ ಭಾರತದ ವಿರುದ್ಧ ಆರೋಪಿಸಿದ್ದರು.

ನಹಿದ್ ಅವರು ಭಾರತವನ್ನು “ಬಾಂಗ್ಲಾದೇಶ ವಿರೋಧಿ” ನೀತಿಯಿಂದ ಹೊರಬರುವಂತೆ ಒತ್ತಾಯಿಸಿದ್ದರು. ಬಾಂಗ್ಲಾದೇಶದಲ್ಲಿ 1.8 ಮಿಲಿಯನ್ ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾ ಪ್ರವಾಹದ ವಿಡಿಯೋಗಳನ್ನು ಹಂಚಿಕೊಂಡು ಭಾರತದ ವಿರುದ್ಧ ಪೋಸ್ಟ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಭಾರತ ಸರ್ಕಾರ ‘ತಪ್ಪಾದ ಮಾಹಿತಿಯನ್ನು ಹರಡಿಬೇಡಿ’ ಎಂದು ಎಚ್ಚರಿಕೆ ನೀಡಿದೆ. ತ್ರಿಪುರಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿರುವುದರಿಂದ ಬಾಂಗ್ಲಾದೇಶದಲ್ಲಿ ಪ್ರವಾಹ ಉಂಟಾಗಿದೆ ಎಂಬ ಹೇಳಿಕೆಯನ್ನು ಭಾರತ ನಿರಾಕರಿಸಿದೆ. ಭಾರೀ ಮಳೆಯ ಕಾರಣದಿಂದ ಬಾಂಗ್ಲಾದಲ್ಲಿ ಪ್ರವಾಹ ಉಂಟಾಗಿದೆಯೇ ವಿನಃ ಭಾರತ ಇದಕ್ಕೆ ಹೊಣೆಯಲ್ಲ ಎಂದಿದೆ.

ಬಾಂಗ್ಲಾದೇಶದ ಜಿಲ್ಲೆಗಳಲ್ಲಿ ಪ್ರವಾಹವು ಭಾರೀ ಮಳೆಯಿಂದ ಉಂಟಾಗಿದೆಯೇ ಹೊರತು ತ್ರಿಪುರಾದ ಗುಮ್ಟಿ ನದಿಯ ಮೇಲಿನ ಡಂಬೂರ್ ಅಣೆಕಟ್ಟಿನಿಂದ ಬಿಡುಗಡೆಯಾದ ನೀರಿನಿಂದಲ್ಲ ಎಂದು ಹೇಳಿದೆ. ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರು ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥರನ್ನು ಭೇಟಿಯಾಗಿ ದ್ವಿಪಕ್ಷೀಯ ಸಹಕಾರವನ್ನು ಪುನರುಚ್ಚರಿಸಿದ್ದಾರೆ.

“ತ್ರಿಪುರಾದ ಗುಮ್ಟಿ ನದಿಯ ಮೇಲ್ಭಾಗದ ದುಂಬೂರು ಅಣೆಕಟ್ಟನ್ನು ತೆರೆಯುವ ಮೂಲಕ ಬಾಂಗ್ಲಾದೇಶದ ಪೂರ್ವ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಪ್ರಸ್ತುತ ಪ್ರವಾಹದ ಪರಿಸ್ಥಿತಿ ಉಂಟಾಗಿದೆ ಎಂದು ಬಾಂಗ್ಲಾದೇಶದಲ್ಲಿ ಕಳವಳ ವ್ಯಕ್ತಪಡಿಸುವುದನ್ನು ನಾವು ನೋಡಿದ್ದೇವೆ. ಇದು ವಾಸ್ತವಿಕವಾಗಿ ಸರಿಯಲ್ಲ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಗುಮ್ಟಿ ನದಿಯು ಬಾಂಗ್ಲಾದೇಶವನ್ನು ಪ್ರವೇಶಿಸುವ ಮೊದಲು ಈಶಾನ್ಯ ಭಾರತದ ರಾಜ್ಯವಾದ ತ್ರಿಪುರಾ ಮೂಲಕ ಹರಿಯುತ್ತದೆ. ತ್ರಿಪುರಾದಲ್ಲಿರುವ ದುಂಬೂರ್ ಅಣೆಕಟ್ಟು ಬಾಂಗ್ಲಾದೇಶದ ಗಡಿಯಿಂದ 120 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿದೆ ಎಂದು MEA ವಿವರಿಸಿದೆ. ಆದರೆ, ಬಾಂಗ್ಲಾದೇಶದಲ್ಲಿ ವಿನಾಶಕ್ಕೆ ಕಾರಣವಾದ ಪ್ರವಾಹವು ಅಣೆಕಟ್ಟಿನ ಕೆಳಗಿರುವ ದೊಡ್ಡ ಜಲಾನಯನ ಪ್ರದೇಶಗಳಿಂದ ನೀರಿನಿಂದ ಉಂಟಾಗಿದೆ ಎಂದು ಅದು ಹೇಳಿದೆ.

ಬಾಂಗ್ಲಾದೇಶದ ಆರು ಜಿಲ್ಲೆಗಳಲ್ಲಿ ಸುಮಾರು 18 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಎಂಟು ಜಿಲ್ಲೆಗಳಲ್ಲಿ 3 ಮಿಲಿಯನ್ ಜನರು ಸಿಲುಕಿಕೊಂಡಿದ್ದಾರೆ. ತ್ರಿಪುರಾ ಮತ್ತು ಬಾಂಗ್ಲಾದೇಶದ ಪಕ್ಕದ ಜಿಲ್ಲೆಗಳಲ್ಲಿ ಆಗಸ್ಟ್ 21ರಿಂದ ಭಾರೀ ಮಳೆಯು ಮುಂದುವರಿದಿದೆ. ಇದು ತ್ರಿಪುರಾದಿಂದ ನೀರಿನ ಸ್ವಯಂಚಾಲಿತ ಬಿಡುಗಡೆಗೆ ಕಾರಣವಾಗಿದೆ.

Share with Friends
author avatar
News Desk