ಗುಂಡಿ ಮುಚ್ಚಲು ವಿದೇಶಿ ಯಂತ್ರಗಳ ಮೊರೆ ಹೋದ ಬಿಬಿಎಂಪಿ, ಬೆಂಗಳೂರಿಗರ ಆಕ್ರೋಶ
ಬೆಂಗಳೂರು : ಸಿಲಿಕಾನ್ ಸಿಟಿಯ ರಸ್ತೆಗುಂಡಿಗಳನ್ನ ಮುಚ್ಚಲು ಬಿಬಿಎಂಪಿ ಮತ್ತೆ ಎಡವಿದ್ದು ಗುಂಡಿ ಮುಚ್ಚಲು ಹೊಸ ಟೆಕ್ನಾಲಜಿ ಮೊರೆ ಹೋಗಿದೆ.
ರಸ್ತೆ ಗುಂಡಿ ಮುಚ್ಚಲು ಜಟ್ ಪ್ಯಾಚರ್ ಯಂತ್ರ ಖರೀದಿಗೆ ಪಾಲಿಕೆ ಮುಂದಾಗಿದ್ದು ರಾಜಧಾನಿಯ ರಸ್ತೆಗುಂಡಿಗಳಿಗೆ ಮುಕ್ತಿ ನೀಡಲು ವಿದೇಶಿ ಯಂತ್ರಗಳ ಮೊರೆ ಹೋಗಿದೆ. 5 ಕೋಟಿ ವೆಚ್ಚದಲ್ಲಿ ಎರಡು ಗುಂಡಿ ಮುಚ್ಚುವ ಯಂತ್ರ ಖರೀದಿಗೆ ಬಿಬಿಎಂಪಿ ಪ್ಲಾನ್ ಮಾಡಿದೆ.
ಬಿಬಿಎಂಪಿಯ ಆರ್ ಆರ್ ನಗರ ವಲಯ ಹಾಗೂ ಪೂರ್ವ ವಲಯಗಳಲ್ಲಿ ಅತಿ ಹೆಚ್ಚು ಗುಂಡಿಗಳಿದ್ದು ಸಾರ್ವಜನಿಕರು ಆಕ್ರೋಶ ವ್ಯಕಪಡಿಸುತ್ತಿದ್ದಾರೆ. ಈ ಹಿಂದೆ ಎಐ ಕ್ಯಾಮರಾ ಮೂಲಕ ಮಾನಿಟರ್ ಮಾಡ್ತೀವೆ ಅಂತಾ ಹೇಳಿ ಸೈಲೆಂಟ್ ಆಗಿದ್ದ ಪಾಲಿಕೆ, ಇತ್ತ ಗುಂಡಿ ಗಮನ ಆಪ್ ಬಿಡುಗಡೆ ಮಾಡಿದ್ರೂ ಗುಂಡಿಗಳಿಗೆ ಮುಕ್ತಿ ಸಿಕ್ಕಿರಲಿಲ್ಲ.
ಇದೀಗ ಗುಂಡಿ ಹೆಸರಲ್ಲಿ ಜನರ ತೆರಿಗೆ ಹಣ ವ್ಯರ್ಥಮಾಡಲು ಮುಂದಾಗಿರುವ ಬಿಬಿಎಂಪಿ ವಿರುದ್ಧ ಬೆಂಗಳೂರಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
