BlogLatestTop Storiesಬೆಂಗಳೂರು-Bengaluruರಾಜ್ಯ-Karnataka

ಬೆಂಗಳೂರಿನಲ್ಲಿ ಮತ್ತೊಂದು ನಿಗೂಢ ಸ್ಫೋಟ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅನುಮಾನಾಸ್ಪದ ಸ್ಪೋಟವಾಗಿರುವ ಕುರಿತು ವರದಿಯಾಗಿದೆ. ಬೆಂಗಳೂರು ನಗರದ ಜೆಪಿ ನಗರ 24ರ ಮೇನ್ ಉಡುಪಿ ಉಪಹಾರ ಬಳಿ ಘಟನೆ ನಡೆದಿದೆ. ಅಡುಗೆ ಮಾಡುವಾಗ ಕುಕ್ಕರ್ ಸ್ಪೋಟಗೊಂದಿದೆ ಎಂದು ಹೇಳಲಾಗುತ್ತಿದ್ದು ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಘಟನೆ ಕುರಿತು ಪುಟ್ಟೇನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದು ಸ್ಪೋಟದ ಬಗ್ಗೆ ಅನೇಕ ಅನುಮಾನಗಳು ಕಾಡಲಾರಂಭಿಸಿವೆ. ಕುಕ್ಕರ್ ಸ್ಪೋಟಗೊಂಡ ಬೆನ್ನಲ್ಲೆ ದೊಡ್ಡ ಪ್ರಮಾಣದ ಶಬ್ದ ಕೇಳಿಬಂದಿದ್ದು , ಘಟನೆಯಲ್ಲಿ ಮನೆಯಲ್ಲಿ ಇದ್ದ ವಸ್ತುಗಳು ಬೆಂಕಿಗೆ ಆಹುತಿ, ಮನೆಯಲ್ಲಿ ಸುಟ್ಟ ವೈಯರ್ ಗಳು ಪತ್ತೆಯಾಗಿದ್ದು ಎನ್ಐಎ ಹಾಗೂ ಕೇಂದ್ರ ತನಿಖಾ ತಂಡ ಬೇಟಿ ನೀಡಿ ಪರೀಶಿಲನೆ ನಡೆಸುತ್ತಿದೆ.

ಸ್ಫೋಟದಲ್ಲಿ ಉತ್ತರ ಪ್ರದೇಶ ಮೂಲದ ಸಮೀರ್, ಮೋಸಿನ್ ಎಂಬುವರಿಗೆ ಗಾಯಗಳಾಗಿವೆ. ಸ್ಪೋಟದ ತೀವ್ರತೆಗೆ ವಸ್ತಗಳೆಲ್ಲ ಚೆಲ್ಲಾಪಿಲ್ಲಿ ಆಗಿವೆ.
ರಾಮೇಶ್ವರಂ ಕೆಫೆಯಲ್ಲಿ ಕೂಡ ಆರಂಭದಲ್ಲಿ ಸಿಲಿಂಡರ್‌ ಸ್ಫೋಟ ಎನ್ನಲಾಗಿತ್ತು ಆದರೆ ಬಳಿಕ ಅದು ಭಯೋತ್ಪಾದಕ ಕೃತ್ಯ ಎನ್ನುವುದು ಖಚಿತವಾಗಿತ್ತು. ಅದೇ ಮಾದರಿಯಲ್ಲಿ ಜೆಪಿ ನಗರದಲ್ಲಿ ನಡೆದಿರುವ ಸ್ಪೋಟವೂ ಕೂಡ ಅನುಮಾನ ಮೂಡಿಸುತ್ತಿದೆ.

Share with Friends
author avatar
News Desk