BlogLatestTop Storiesಬೆಂಗಳೂರು-Bengaluru

ಸೆಕೆಂಡ್ ಕಾರ್ ಶೋರೂಂನಲ್ಲಿ ಕೆಲಸಕ್ಕಿದ್ದವನಿಂದಲೇ ಕಳ್ಳತನ

ಬೆಂಗಳೂರು : ಜೊತೆಯಲ್ಲಿದ್ದ ಆಪ್ತನಿಂದಲೇ ಸೆಕೆಂಡ್ ಕಾರ್ ಶೋರೂಂ ನಲ್ಲಿ ಕಳ್ಳತನ ಮಾಡಿದ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಾವನಾ ಕಾರ್ಸ್ ಎಂಬ ಸೆಕೆಂಡ್ ಶೋ ರೂಂ ನಲ್ಲಿ ಲಿತಿನ್ ಎಂಬ ಆರೋಪಿ ಹಲವು ದಿನಗಳಿಂದ ಭಾವನಾ ಕಾರ್ಸ್ ಮಾಲೀಕ ಕೆಂಪೆಗೌಡ ಜೊತೆಯಲ್ಲೆ ಕೆಲಸ ಮಾಡುತ್ತಿದ್ದ. ಕಳೆದ ತಿಂಗಳು 20 ತಾರೀಖು ಮಾಲೀಕ ಕೆಂಪೆಗೌಡಗೆ ತಿಳಿಯದ ಹಾಗೆ ಕಛೇರಿಯ ಕೀ ಪಡೆದುಕೊಂಡಿದ್ದ. ನಂತರ ಮಧ್ಯರಾತ್ರಿ1.30 ಸುಮಾರಿಗೆ ಕ್ಯಾಪ್ ಮಾಸ್ಕ್ ಹಾಕಿ ಕಛೇರಿಗೆ ಎಂಟ್ರಿ ಕೊಟ್ಟು ಆಫೀಸ್ ಡ್ರಾಯರ್ ನಲ್ಲಿದ್ದ ಒಂದು ಲಕ್ಷ ನಗದು ಹಣ ಕಳ್ಳತನ ಮಾಡಿದ್ದ.

ನಂತರ ಆಫೀಸ್ ಮುಂಬಾಗದಲ್ಲಿದ್ದ ಕಾರನ್ನು ಕದ್ದು ರೌಂಡ್ಸ್ ಹಾಕಿ ಮತ್ತೆ ವಾಪಸ್ ಬಂದಿದ್ದ. ಆಫೀಸ್ ಮುಂದೆ ಕಾರ್ ಬಿಟ್ಟು ಹೋಗುವಾಗ ಕಾರಿನ ಕೀ ಗೇಟ್ ಬಳಿ ಎಸೆದು ಎಸ್ಕೆಪ್ ಆಗಿದ್ದ.

ಈ ಕುರಿತು ಸಿಸಿಟಿವಿ ಪರಿಶೀಲಿಸಿ ಗಿರಿನಗರ ಪೊಲೀಸರಿಗೆ ದೂರು ನೀಡಿದ್ದ ಮಾಲೀಕ ಕೆಂಪೇಗೌಡ. ದೂರಿನ ಮೇರೆಗೆ ಲಿತಿನ್ ನನ್ನ ಬಂಧಿಸಿ ಜೈಲಿಗಟ್ಟಿರೊ ಗಿರಿನಗರ ಪೊಲೀಸರು.

Share with Friends
author avatar
News Desk