
ಅಥಣಿಯಲ್ಲಿ ಎಐ ಕ್ಯಾಮೆರಾ ಎಡವಟ್ಟು – ಕಾರಿಗೆ ಹೆಲ್ಮೆಟ್ ದಂಡ!
ಚಿಕ್ಕೋಡಿ:ಅಥಣಿಯಲ್ಲಿ ಎಐ ಕ್ಯಾಮೆರಾ ಎಡವಟ್ಟು – ಕಾರಿಗೆ ಹೆಲ್ಮೆಟ್ ದಂಡ! ಎಂಬ ವಿನೂತನ ಪ್ರಕರಣ ಬೆಳಕಿಗೆ ಬಂದಿದೆ.
ಅಥಣಿಯಲ್ಲಿ ಟ್ರಾಫಿಕ್ ಪೊಲೀಸರ ಎಐ ಕ್ಯಾಮೆರಾ ಅವಾಂತರ.ಕಾರಿನಲ್ಲಿ ಸಂಚರಿಸುತ್ತಿದ್ದ ಮಾಲೀಕನಿಗೆ ಹೆಲ್ಮೆಟ್ ಹಾಕದ ದಂಡ.ಅಥಣಿ ನಿವಾಸಿ ಸುಭಾಷ್ ಬೋಜನೆಗೆ ಬಂದ ₹500 ದಂಡದ ನೋಟಿಸ್.ಅಂಬೇಡ್ಕರ್ ಸರ್ಕಲ್ನಲ್ಲಿ ಕಾರಿಗೆ ಹೆಲ್ಮೆಟ್ ದಂಡ ವಿಧಿಸಿದ ಎಐ ಕ್ಯಾಮೆರಾ.
ಟ್ರಾಫಿಕ್ ನಿಯಮ ಉಲ್ಲಂಘನೆ ಆರೋಪದಡಿ ವಾಟ್ಸಪ್ಗೆ ಬಂದ ದಂಡದ ಮೆಸೇಜ್.ಕಾರಿಗೆ ಹೆಲ್ಮೆಟ್ ದಂಡ ಬಂದಿದ್ದನ್ನು ಕಂಡು ಮಾಲೀಕ ಸುಭಾಷ್ ಬೋಜನೆ ಶಾಕ್.ವಿನೂತನ ದಂಡದಿಂದ ಬೇಸರಗೊಂಡ ಮಾಲೀಕ ಎಐ ಕ್ಯಾಮೆರಾ ಎಡವಟ್ಟು ಬಯಲು ಮಾಡಲು ಹೆಲ್ಮೆಟ್ ಧರಿಸಿ ಕಾರು ಚಲಾಯಿಸಿದ ವಿಡಿಯೋ ಮಾಡಿದ್ದಾರೆ.
ಸುಭಾಷ್ ಬೋಜನೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಿನಲ್ಲಿ ಹೆಲ್ಮೆಟ್ ಹಾಕಿ ಕುಳಿತು “ನಾನು ನಿಯಮ ಪಾಲಿಸಿದ್ದೇನೆ, ಇನ್ನು ದಂಡ ಹಾಕಬೇಡಿ” ಎಂದು ವ್ಯಂಗ್ಯವಾಗಿ ವಿಡಿಯೋ ಮಾಡಿದ್ದಾರೆ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಎಐ ಕ್ಯಾಮೆರಾದ ತಾಂತ್ರಿಕ ದೋಷದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
