
ಸರ್ಕಾರಿ ಗೋಮಾಳಕ್ಕೆ ಅಕ್ರಮ ಖಾತೆ..!
ತುಮಕೂರು : ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯ ಕಂದಾಯ ಅಧಿಕಾರಿಗಳ ವಿರುದ್ಧ ಕೆಂಡಮಂಡಲವಾದ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕಡಕೂರು ಚಂದ್ರಶೇಖರ್..
ಸರ್ಕಾರಿ ಗೋಮಾಳ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿರುವ ಮಾಯಸಂದ್ರ ಕಂದಾಯ ತನಿಖಾಧಿಕಾರಿ ರಾಜೇಶ್ ಮತ್ತು ಕೆಲ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೂಡಲೇ ಕರ್ತವ್ಯದಿಂದ ವಜಾ ಗೊಳಿಸಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ಕಡಕೂರು ಚಂದ್ರಶೇಖರ್ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.ಮಾಯಸಂದ್ರ ಹೋಬಳಿ ಕಂದಾಯ ಇಲಾಖೆ ಆರ್ ಐ ಮತ್ತು ಕೆಲ ಗ್ರಾಮ ಆಡಳಿತ ಅಧಿಕಾರಿಗಳು ಅಕ್ರಮದಲ್ಲಿ ಶಾಮಿಲಾಗಿದ್ದಾರೆ.
ಅಧಿಕಾರಿಗಳು ಕರ್ತವ್ಯ ಲೋಪ ಯಸಗಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.ಮಾಯಸಂದ್ರ ಹೋಬಳಿಯ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಅರ್ಹ ರೈತರಿಗೆ ಸ್ಪಂದಿಸುತ್ತಿಲ್ಲ ಪೌತಿಕಾತೆ ಅರ್ಜಿಗಳನ್ನು ರೈತರು ಹಾಗೂ ಸಾರ್ವಜನಿಕರು ಹಣ ಕೊಡದ ಕಾರಣ ತಿರಸ್ಕರಿಸಿ ಅಲೆದಾಡಿಸುತ್ತಿದ್ದಾರೆ. ಸರ್ಕಾರಿ ಜಮೀನುಗಳಿಗೆ ತರಾತುರಿಯಲ್ಲಿ ಖಾತೆ ಮಾಡಿಕೊಡುವ ನೆಪಮಾಡಿಕೊಂಡಿದ್ದಾರೆ.
ಆರ್ ಐ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ನೈಜ ರೈತರ ನ್ಯಾಯತ ಅರ್ಜಿಗಳನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸುತ್ತಿದ್ದಾರೆ .ಸರ್ವೇ ನಂಬರ್ ಒಂದರಲ್ಲಿ ಮೂರು ಎಕರೆ ಜಮೀನಿನ ಪ್ರಕರಣದಲ್ಲೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ. 12/21 ಆದೇಶ ಜಾರಿಯಾದ ಬಳಿಕ ಪಿಎ ಹಾಗೂ ಆರ್ ಐ ಸ್ಥಳ ಪರಿಶೀಲನೆ ನಡೆಸಿ ವರದಿ ದಾಖಲಿಸಬೇಕಿತ್ತು ,ಯಾವುದೇ ಪ್ರಕ್ರಿಯೆಯನ್ನು ಕೈಗೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇಲ್ಲಿನ ಕಂದಾಯ ನಿರೀಕ್ಷಕ ರಾಜಶೇಖರ್ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಾದ ಬಿರಾದರ್ ಬಸವರಾಜ್ ಎಂಬುವರು ಕಂದಾಯ ನಿಯಮಾವಳಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ.ಅವರು ಕರ್ತವ್ಯಕ್ಕೆ ಹಾಜರಾದ ದಿನದಿಂದ ಇಂದಿನವರೆಗೂ ನಡೆಸಿರುವ ಪ್ರತಿಯೊಂದು ಖಾತೆ ವರ್ಗಾವಣೆ ಇನ್ನಿತರೆ ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಿ ತನಿಖೆ ನಡೆಸಬೇಕು.
ಮುಸ್ಲಿಂ ಧರ್ಮದ ಕುಟುಂಬದವರಿಂದ ರಮೇಶ್ ಎಂಬುದು ಜಮೀನು ಪಡೆದುಕೊಂಡಿದ್ದಾರೆ ಆದರೂ ಅಧಿಕಾರಿಗಳು ದೌರ್ಜನ್ಯ ಮಾಡುತ್ತಿದ್ದಾರೆ ,ಮಣ್ಣು ತಿನ್ನುವ ಕೆಲಸ ಅಧಿಕಾರಿಗಳು ಮಾಡಿದ್ದಾರೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆಯನ್ನು ಮಾಡಬೇಕು ಈ ಕೂಡಲೇ ಇಂತಹ ಭ್ರಷ್ಟ ಅಧಿಕಾರಿಗಳನ್ನು ಕರ್ತವ್ಯದಿಂದ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ ಕೂಡಲೇ ವಜಗೊಳಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ
ಸುದ್ದಿಗೋಷ್ಠಿಯಲ್ಲಿ ವರಹಸಂದ್ರ ಶಿವಕುಮಾರ್, ಆರದಹಳ್ಳಿ ಸುಧಾಕರ್, ರಂಗಧಾಮಯ್ಯ, ಸಂಘದ ಮಾರ್ಗದರ್ಶಕರಾದ ಅಶೋಕ್ ಕುಮಾರ್ ಸೇರಿದಂತೆ ಮುಂತಾದ ರೈತರು ಉಪಸ್ಥಿತರಿದ್ದರು
