
ತಾಲೂಕನ್ನು ಬರ ಪೀಡಿತ ಎಂದು ಘೋಷಣೆಗೆ ಒತ್ತಾಯಿಸಿ ಬಂದ್
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಬರ ಪೀಡಿತದ ಕುರಿತು ಬಂದ್ ಗೆ ಕರೆ ಕೊಟ್ಟಿದ್ದಾರೆ.ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ ಎಸ್ ಪಾಟೀಲ ನಡಹಳ್ಳಿ ಸಹ ಬಂದ್ ಗೆ ಕರೆ ಕೊಟ್ಟಿದಾರೆ.
ಮುದ್ದೇಬಿಹಾಳ ತಾಲೂಕು ಬರ ಘೋಷಣೆ, ರೈತರಿಗೆ 5 ಲಕ್ಷದವರೆಗಿನ ಸಾಲ ಮನ್ನಾ ಸೇರಿ ಹಲವು ಬೇಡಿಗೆ ಈಡೇರಿಕೆಗೆ ಆಗ್ರಹಿಸಿ ಬಂದ್ ಕರೆ ಕೊಟ್ಟಿದ್ದಾರೆ.
ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರಾದ ಎ ಎಸ್ ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಪಕ್ಷಾತೀತವಾಗಿ ರೈತರು, ರೈತಪರ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ.
ಅದರಂತೆ ಬಂದ್ ಗೆ ಕರೆ ಕೊಟ್ಟು ಎಲ್ಲ ಅಂಗಡಿಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ಬಂದ್ ಗೆ ಬೆಂಬಲ ನೀಡಿದ್ದಾರೆ.ಹಾಗೂ ಸಾರಿಗೆ ಬಸ್ ಸಂಚಾರವೂ ಸಂಪೂರ್ಣ ಬಂದ್ ಆಗಿದೆ.
ಈ ಬಂದ್ ಕರೆ ನೀಡಿ ಖಾಸಗಿ ಟ್ಯಾಕ್ಸಿ,ಆಟೋಗಳು ಸಹ ಬಂದ್ ಗೆ ಜಾನಲೆ ನಿದ್ದರೆ. ಯಾವುದೇ ಒಂದು ವಾಹನವೂಕೂಡ ರಸ್ತೆಗಿಳಿಯದೆ ಬಂದ್ ನಡೆಸಿದ್ದಾರೆ.ಮುಖ್ಯ ಬಜಾರ್ ಮಾತ್ರವಲ್ಲದೆ ಬಡಾವಣೆಗಳಲ್ಲಿರುವ ವ್ಯಾಪಾರಸ್ಥರಿಂದಲೂ ಅಂಗಡಿ ಮುಂಗಟ್ಟು ಬಂದ್ ಆಗಿದ್ದಾವೆ.
