Blog

ತವರುಮನೆ ಬಿಟ್ಟುಬಾರದ ಪತ್ನಿಯನ್ನು ಇರಿದು ಕೊಂದ ಪತಿ

ಬೆಂಗಳೂರು: ಇನ್ಸ್ಟಾಗ್ರಾಮ್ ಸ್ಟಾಗ್ರಾಂ ಲೈವ್ ನಲ್ಲಿ ಪತ್ನಿಯನ್ನು ನಿಂದಿಸಿ ನಂತರ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. ತಬರೇಜ್ ಪತ್ನಿಯನ್ನೇ ಕೊಂದ ಪತಿ. ಫಾಜಿಲಾ ಕೊಲೆಯಾದ ಮಹಿಳೆ. 9 ವರ್ಷಗಳ ಹಿಂದೆ ಫಾಜಿಲಾ ಹಾಗೂ ತಬರೇಜ್ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಪತಿ-ಪತ್ನಿ ನಡುವೆ ವೈಮನಸ್ಸು ಹೆಚ್ಚಾದ ಹಿನ್ನೆಲೆಯಲ್ಲಿ ಫಾಜಿಲಾ ಮಕ್ಕಳೊಂದಿಗೆ ತವರಿಗೆ ಬಂದಿದ್ದಳು.

ಇಂದು ಬೆಳಿಗ್ಗೆ ಎಂದಿನಂತೆ ಮಕ್ಕಳು ಶಾಲೆಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿದ ತಬರೇಜ್, ಪತ್ನಿ ಜೊತೆ ಜಗಳವಾಡಿದ್ದಾನೆ. ಇದೇ ವೇಳೆ ಇನ್ ಸ್ಟಾಗ್ರಾಂ ಲೈವ್ ಮಾಡುತ್ತಲೇ ಚಾಕುವನ್ನು ತೆಗೆದು ಪತ್ನಿಗೆ ಮನಬಂದಂತೆ ಇರಿದು ಹತ್ಯೆ ಮಾಡಿದ್ದಾನೆ. ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದಾನೆ.

ಪತ್ನಿಯನ್ನು ಕೊಲ್ಲಲು ಮನೆಗೆ ಬಂದಿದ್ದ ತಬರೇಜ್‌ನಾ ಓಡಾಟವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮಾಯಕನಂತೆ ಮನೆಗೆ ಬರುವ ತಬರೇಜ್ ಯಾರಿಗೂ ಡೌಟ್ ಬಾರದಂತೆ ರಸ್ತೆಯಲ್ಲಿ ಬೈಕ್ ಬಿಟ್ಟು ಸೈಲೆಂಟ್ ಆಗಿ ಒಳಗೆ ನುಗ್ಗಿದ್ದ. ಬಳಿಕ ಚಾಕು ತೆಗೆದು ಹತ್ಯೆ ಮಾಡಿ, ಚಾಕುವನ್ನು ಕೈನಲ್ಲಿಯೇ ಹಿಡಿದು ಹೊರ ಬಂದಿದ್ದಾನೆ. ಬಳಿಕ ಬೈಕ್ ಏರಿ ಎಸ್ಕೇಪ್ ಆಗಿದ್ದಾನೆ.

ಒಂಭತ್ತು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ಎರಡು ಮಕ್ಕಳಿದ್ದು ಇತ್ತೀಚೆಗೆ ಗಾಂಜಾ, ಕಳ್ಳತನದ ಕೇಸ್ ನಲ್ಲಿ ಭಾಗಿಯಾಗಿದ್ದ ಆರೋಪಿ ಅಲ್ಲದೇ ಮನೇಲಿ ಪತ್ನಿ ಜೊತೆ ಹೆಚ್ಚು ಜಗಳ ಮಾಡ್ತಿದ್ದ ಇಬ್ಬರ ಜಗಳ ನೋಡಿ ವಿಚ್ಛೇದನ ನೀಡಿಸೋಕು ಪ್ರಯತ್ನ ಮಾಡ್ತಿದ್ದ ಸಂಬಂಧಿಕರು

ಐದು ವರ್ಷಗಳ ಹಿಂದೆಯೇ ದೂರವಾಗಿದ್ದ ದಂಪತಿ ಕಳ್ಳತನ ಕೇಸ್, ಗಾಂಜಾ ಕೇಸ್ ನಲ್ಲಿ ಭಾಗಿಯಾಗ್ತಿದ್ದ ಆರೋಪಿ ತಬ್ರೇಜ್ ಪಾಷಾ ಇತ್ತ ಅಂಗವಿಕಲ ತಾಯಿಯೊಂದಿಗೆ ಇಬ್ಬರು ಮಕ್ಕಳ ಜೊತೆ ವಾಸವಿದ್ದ ಫಾತಿಮಾ ಮಕ್ಕಳ ಭವಿಷ್ಯ ನೋಡ್ಕೋತೀನಿ ಅಂತಾ ತಾಯಿ ಜೊತೆ ಇದ್ದ ಫಾತಿಮಾ..

ಆದರೂ ಆಗಾಗ ಮನೆಗೆ ಬಂದು ಜಗಳ ಮಾಡ್ತಿದ್ದ ಆರೋಪಿ ತಬ್ರೇಜ್ ಇತ್ತೀಚೆಗೆ ರಸ್ತೆಯೊಂದರ ಬಳಿ ಅಡ್ಡ ಹಾಕಿ ಜಗಳ ತೆಗೆದಿದ್ದ ಆರೋಪಿ ಅಲ್ಲದೇ ಕೊಲೆ ಮಾಡ್ತೀನಿ ಅಂತ ಹೇಳಿಕೊಂಡು ಓಡಾಡ್ತಿದ್ದ ಆರೋಪಿ ಹೀಗಾಗಿ ಮನೆಗೆ ಸಿಸಿಟಿವಿ ಅಳವಡಿಸಿದ್ದ ಫಾತಿಮಾ ತಾಯಿ ಆತ ಏನಾದ್ರು ಮಾಡ್ತಾನೆ ಅಂತಲೇ ಸಿಸಿಟಿವಿ ಅಳವಡಿಕೆ ಮಾಡಲಾಗಿತ್ತು. ಇಂದು ಬೆಳಗ್ಗೆ ಜಗಳದಲ್ಲಿ ಪತ್ನಿಗೆ ಚಾಕು ಇರಿದು ಕೊಲೆ ಮಾಡಿದ್ದು ಆ ನಂತರ ಎಸ್ಕೇಪ್ ಆಗಿರೋ ಆರೋಪಿ ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಪರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share with Friends
author avatar
News Desk