BlogLatestTop Storiesವಿದೇಶ-International

ಇಸ್ರೇಲ್ ಮೇಲೆ ಯಾವುದೇ ಕ್ಷಣದಲ್ಲಿ ಇರಾನ್​ ದಾಳಿ ಸಾಧ್ಯತೆ

ಟೆಹ್ರಾನ್ : ಹಮಾಸ್​ ಮುಖ್ಯಸ್ಥರಾಗಿದ್ದ ಇಸ್ಮಾಯಿಲ್ ಹನಿಯೆಹ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿರುವ ಇರಾನ್​ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ಮೇಲೆ ಯುದ್ಧ ಸಾರಿದ್ದಾರೆ.

ಇಸ್ರೇಲ್ ಮೇಲೆ ಯುದ್ಧಕ್ಕೆ ಇರಾನ್​ನ ಖಮೇನಿ ಆದೇಶ ನೀಡಿದ್ದು ಇಸ್ಮಾಯಿಲ್ ಹನಿಯೆಹ್ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಟೆಹ್ರಾನ್‌ನ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಹನಿಯೆಹ್ ಅವರ ಸಾವನ್ನು ಘೋಷಿಸಿದ ಬೆನ್ನಲ್ಲೇ ಇರಾನ್ ಬುಧವಾರ ಬೆಳಿಗ್ಗೆ ದೇಶದ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದೆ. ಅಧಿಕಾರಿಗಳ ಪ್ರಕಾರ, ಈ ಸಭೆಯಲ್ಲಿ ಖಮೇನಿ ಇಸ್ರೇಲ್ ಮೇಲೆ ದಾಳಿಯ ಆದೇಶವನ್ನು ನೀಡಿದ್ದಾರೆ. ಇಂತಹ ಸಭೆಯು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ನಡೆಸಲಾಗುತ್ತದೆ.

ಹಿಂದಿನ ಏಪ್ರಿಲ್‌ನಲ್ಲಿ ಸಿರಿಯಾದಲ್ಲಿ ಇಸ್ರೇಲಿ ವಾಯುದಾಳಿಯು ಇಬ್ಬರು ಉನ್ನತ ಇರಾನ್ ಮಿಲಿಟರಿ ಕಮಾಂಡರ್‌ಗಳನ್ನು ಕೊಲ್ಲುವ ಸಮಯದಲ್ಲಿ ಇದೇ ರೀತಿಯ ಸಭೆಯನ್ನು ಕರೆಯಲಾಗಿತ್ತು. ಇರಾನ್‌ನ ಸರ್ಕಾರಿ ಪ್ರೆಸ್ ಟಿವಿ ಪ್ರಕಾರ, ಅಯತೊಲ್ಲಾ ಅಲಿ ಖಮೇನಿ ಇಂದು ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ನಡೆಸಿದ್ದಾರೆ.

ಒಂದುವೇಳೆ ಇರಾನ್ ಮತ್ತು ಅದರ ಪ್ರಾಕ್ಸಿಗಳು ನಮ್ಮ ದೇಶದ ವಿರುದ್ಧ ಯಾವುದೇ ದಾಳಿ ನಡೆಸಿದರೆ ಇಸ್ರೇಲ್ ಪೂರ್ಣ ಪ್ರಮಾಣದ ಯುದ್ಧಕ್ಕೆ ಹೋಗಲು ಸಿದ್ಧವಾಗಿದೆ ಎಂದು ರಾಜತಾಂತ್ರಿಕ ಬ್ಯಾಕ್‌ಚಾನಲ್‌ಗಳ ಮೂಲಕ ಇರಾನ್‌ಗೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಇಸ್ರೇಲ್‌ನ ಚಾನೆಲ್ ವರದಿ ಮಾಡಿದೆ.

Share with Friends
author avatar
News Desk