BlogLatestTop Storiesಬೆಂಗಳೂರು-Bengaluru

ಕೇರಳ ಗುಡ್ಡ ಕುಸಿತದ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಬಿಬಿಎಂಪಿ

ಬೆಂಗಳೂರು : ಕೇರಳ ಸಂತ್ರಸ್ತರ ನೆರವಿಗೆ ನಿಂತ ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘ ವಯನಾಡು ಗುಡ್ಡ ಕುಸಿತ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ರವಾನೆ ಮಾಡಿದೆ. ಎರಡು ಗೂಡ್ಸ್ ಟ್ರಕ್ ಗಳಲ್ಲಿ ಆಹಾರ-ದಿನಸಿ ಸಾಮಾಗ್ರಿ ರವಾನೆ ಮಾಡಿದೆ.

ಭೂಕುಸಿತದಿಂದ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ನೆರವು ಮತ್ತು ದಿನಸಿ ಸಾಮಾಗ್ರಿಗಳನ್ನು ತಲುಪಿಸುವ ವಾಹನಕ್ಕೆ ಮುಖ್ಯ ಆಯುಕ್ತರಾದ ತುಷಾರ್‌ ಗಿರಿನಾಥ್‌ ರವರು ಮತ್ತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವದ್ದಿ ಸಂಘ ಮತ್ತು ಸಹಕಾರ ಸಂಘದ ಅಧ್ಯಕ್ಷರಾದ ಎ.ಅಮತ್‌ ರಾಜ್‌ ರವರು ಚಾಲನೆ ನೀಡಿದರು.

ಅಗತ್ಯವಸ್ತುಗಳ ಜೊತೆ ತೆರಳಲಿರೋ 30 ಜನ ಪಾಲಿಕೆ ನೌಕರರು 5 ಲಕ್ಷ ರೂಪಾಯಿ ಆರ್ಥಿಕ ನೆರವನ್ನೂ ಕೂಡ ನೀಡಲಿದ್ದಾರೆ. ವಯನಾಡ್‌ ಸಂತ್ರಸ್ತರಿಗೆ ಹತ್ತು ಟನ್‌ ಆಹಾರ ಪದಾರ್ಥಗಳು ಮತ್ತು ದಿನ ನಿತ್ಯ ಬಳಕೆಯ ವಸ್ತುಗಳಾದ ಹಾಸಿಗೆ, ದಿಂಬು, ಬೆಡ್‌ ಶಿಟ್‌‍,ಸ್ವರ್ಟ, ಜರ್ಕಿನ್‌, ಪಾದರಕ್ಷೆಗಳು,ಸೀರೆ, ಕಂಬಳಿ,ಮಹಿಳೆಯರ ನೈಟ್‌ ಡ್ರೆಸ್‌‍ ಮತ್ತು ಪಂಚೆ,ಟವಲ್‌‍, ಲುಂಗಿ, ಟೀ ಶರ್ಟ್‌ ನೀಡಲಾಗುತ್ತಿದೆ ಮುಖ್ಯ ಆಯುಕ್ತರಾದ ತುಷಾರ್‌ ಗಿರಿನಾಥ್‌ ಎಂದು ಹೇಳಿದರು.

Share with Friends
author avatar
News Desk