BlogLatestTop Storiesಬೆಂಗಳೂರು-Bengaluru

ಮೆಟ್ರೋ ಟ್ರ್ಯಾಕ್ ಗೆ ಜಿಗಿದ ಮಗು, ತಪ್ಪಿದ ಅನಾಹುತ

ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿಮೆಟ್ರೋ ಟ್ರ್ಯಾಕ್ ಗೆ ನಾಲ್ಕು ವರ್ಷದ ಮಗು ಜಿಗಿದ ಘಟನೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿನಡೆದಿದೆ.

ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಮೆಜೆಸ್ಟಿಕ್ ಗೆ ತೆರಳಲೆಂದು ತಾಯಿ ಹಾಗೂ ನಾಲ್ಕು ವರ್ಷದ ಮಗು ಮೆಟ್ರೋ ನಿಲ್ದಾಣಕ್ಕೆ ಬಂದಿದ್ದರು. ಮೆಟ್ರೋಗೆ ಕಾಯುತ್ತಿದ್ದವೇಳೆ ಆಟವಾಡುತ್ತನಿಂತಿದ್ದಮಗು ಏಕಾಏಕಿ ಮೆಟ್ರೋ ಟ್ರ್ಯಾಕ್ ಗೆ ಜಿಗಿದುಬಿಟ್ಟಿದೆ. ಸ್ಥಳದಲ್ಲಿದ್ದ ಇಬ್ಬರು ಮೆಟ್ರೋ ಸಿಬ್ಬಂದಿಗಳು ತಕ್ಷಣ ಟ್ರ್ಯಾಕ್ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿಮಗುವನ್ನು ರಕ್ಷಿಸಿ ಮೇಲಕೆತ್ತಲಾಗಿದೆ.

ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಮಗು ಬಚಾವ್ ಆಗಿದ್ದು, ಭಾರಿ ಅನಾಹುತವೊಂದು ತಪ್ಪಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕೆಲ ಕಾಲ ಬೈಯ್ಯಪ್ಪನ ಹಳ್ಳಿ ಮೆಟ್ರೋ ನಿಲ್ದಾಣದ ನಿಲ್ದಾಣದ ನೇರಳೆ ಮಾರ್ಗದಲ್ಲಿಮೆಟ್ರೋ ಸಂಚಾರ ವ್ಯತ್ಯಯಗೊಂಡಿತ್ತು.

Share with Friends
author avatar
News Desk