BlogLatestTop Storiesಬೆಂಗಳೂರು-Bengaluru

ನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳಿಗೆ ಹಾರಿ ಯುವಕನೊಬ್ಬ ಸಾವಿಗೆ ಶರಣಾಗಿದ್ದಾನೆ. ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ಮೆಟ್ರೋ ಸ್ಟೇಷನ್‌ನಲ್ಲಿ ಇಂದು ಸಂಜೆ 5.41ರ ಸುಮಾರಿಗೆ 35 ವರ್ಷದ ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

https://youtu.be/TN_gVQcFKBE?si=HzunNgz8OuKgG2My

ಇನ್ನು ಘಟನೆ ಬಳಿಕ ನಮ್ಮ ಮೆಟ್ರೋ ಹಸಿರು ಮಾರ್ಗದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಮೆಟ್ರೋ ಪ್ರಯಾಣಿಕರು ಪರದಾಡುವಂತಾಯ್ತು.

ಸದ್ಯ ಯಲಚೇನಹಳ್ಳಿ ನಿಲ್ದಾ ಣದಿಂದ ರೇಷ್ಮೆ ಸಂಸ್ಥೆ ಕಡೆಗೆ ಮೆಟ್ರೋ ರೈಲು ಸಂಚಾರವನ್ನು ಸ್ಥ ಗಿತಗೊಳಿಸಲಾಗಿದೆ. ನಾಗಸಂದ್ರ ದಿಂದ ಯಲಚೇನಹಳ್ಳಿವರೆಗೆ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ. ಮೃತಯುವಕನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಇನ್ನು ಮೊನ್ನೆ ನಮ್ಮ ಮೆಟ್ರೋದಲ್ಲಿ ಮಗುವೊಂದು ಹಳಿಗೆ ಬಿದ್ದ ಘಟನೆ ನಡೆದಿತ್ತು. ಮೆಟ್ರೋ ಸ್ಟೇಷನ್‌ನಲ್ಲಿ ಆಟವಾಡುತ್ತಲೇ 4 ವರ್ಷದ ಮಗು ಟ್ಯಾಕ್‌ ಮೇಲೆ ಜಿಗಿದು ಬಿಟ್ಟಿತ್ತು. ಮೊನ್ನೆ ರಾತ್ರಿ ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿರುವ ಬಗ್ಗೆ ವರದಿಯಾಗಿತ್ತು. ಹಳಿ ಮೇಲೆ ಮಗು ಬೀಳುತ್ತಿದ್ದಂತೆ ಮೆಟ್ರೋ ಸಿಬ್ಬಂದಿ ತಕ್ಷಣ ಮೆಟ್ರೋ ಟ್ರ್ಯಾಕ್‌ನ ಪವರ್ ಕಟ್ ಮಾಡಿದ್ದರು. ಇದರಿಂದ ಮಗುವಿಗೆ ಯಾವುದೇ ಅಪಾಯವಾಗಿರಲಿಲ್ಲ.

Share with Friends
author avatar
News Desk