Crime NewsLatest

ಉತ್ತರಾಖಂಡ ಹಿಮಪಾತ ಕೇಸ್- ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಸಾವು

ಕಾರವಾರ: ಉತ್ತರಾಖಂಡದಲ್ಲಿ (Uttarakhand) ಆದ ಹವಾಮಾನ ವೈಪರೀತ್ಯ ದಿಂದ ಹಿಮಪಾತವಾಗಿ ನಾಪತ್ತೆಯಾದ ಚಾರಣಿಗರಲ್ಲಿ ಶಿರಸಿ ತಾಲೂಕಿನ ಜಾಗನಹಳ್ಳಿಯ ಯುವತಿ ಪದ್ಮಿನಿ ಸಹ ಇದ್ದು, ಅವರು ಮೃತಪಟ್ಟಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಜಾಗನಹಳ್ಳಿ ಮೂಲದ ಬೆಂಗಳೂರು ನಿವಾಸಿ, ಗೂಗಲ್ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದ ಪದ್ಮಿನಿ ಹೆಗಡೆ (35) ಅವರು ಒಬ್ಬರಾಗಿದ್ದರು. ಟ್ರೆಕ್ಕಿಂಗ್ ಗೈಡ್‌ಗಳಾಗಿ ಉತ್ತರ ಕಾಶಿಯ (Uttara kashi) ಮೂವರು ನಿವಾಸಿಗಳ ಜೊತೆ ಬೆಂಗಳೂರಿನಿಂದ 18 ಮಂದಿ ಹಾಗೂ ಪುಣೆಯಿಂದ ಒಬ್ಬರ ಜೊತೆ ಇವರು ತೆರಳಿದ್ದರು. ಇದನ್ನೂ ಓದಿ: ಎನ್‌ಡಿಎ ಮೈತ್ರಿಕೂಟದ ಸಂಖ್ಯೆ 303ಕ್ಕೆ ಏರಿಕೆ!

https://youtu.be/IrlpjBl1yQk?si=vJPSkhgYEcqbUZvq

ಪದ್ಮಿನಿ ಹೆಗಡೆ ಅವರು ಕೆಲವು ವರ್ಷಗಳಿಂದ ಚಾರಣದಲ್ಲಿ (Trekking) ಆಸಕ್ತಿ ಹೊಂದಿದ್ದರು. ಮೇ 29ರಿಂದ ಜೂನ್ 7ರವರೆಗೆ ಭಟವಾಡಿ ಮಲ್ಲಾ – ಸಿಲ್ಲಾ ಕುಶಕಲ್ಯಾಣ ಸಹಸ್ರತಾಲ್ ಟ್ರೆಕ್ಕಿಂಗ್‌ಗೆ ಅನುಮತಿ ಪಡೆದ ತಂಡದೊಂದಿಗೆ ಪದ್ಮಿನಿ ಅವರು ತೆರಳಿದ್ದರು.ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಪಕ್ಷ ನಾಯಕನ ಸ್ಥಾನ ಫಿಕ್ಸ್‌

ಜೂ. 4ರಂದು ಮಧ್ಯಾಹ್ನದ ಸಮಯಕ್ಕೆ ಹವಾಮಾನ ಸರಿಯಾಗಿಲ್ಲ ಎನ್ನುವುದಾಗಿ ಪದ್ಮಿನಿ ಅವರು ತಮ್ಮ ತಾಯಿಗೆ ಮೆಸೇಜ್ ಹಾಕಿದ್ದರು. ಅವರು ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ನಮಗಿದೆ. ಅವರಿಗೆ ಯಾವುದೇ ಅವಘಡ ಆಗಿದೆ ಎನ್ನುವುದಾಗಿ ನಮಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ ಎನ್ನುವುದಾಗಿ ಪದ್ಮಿನಿ ಅವರ ಕುಟುಂಬದವರು ನಿನ್ನೆ ತಿಳಿಸಿದ್ದರು. ಇದನ್ನೂ ಓದಿ: ರಾಷ್ಟ್ರ ರಾಜಧಾನಿಗೆ ಹೆಚ್ಚುವರಿ ನೀರು ಬಿಡುವಂತೆ ಸುಪ್ರೀಂ ಸೂಚನೆ

https://youtu.be/EN_1kRxjo-4?si=6R7axOWr9ELputm7

ಪದ್ಮಿನಿ ಅವರ ತಂದೆ ಶ್ರೀಪತಿ ಹೆಗಡೆ ಅವರು ನಿಧನರಾಗಿದ್ದಾರೆ. ತಾಯಿ ಶೈಲಾ ಹೆಗಡೆ ಅವರು ಮುಂಬೈನಲ್ಲಿ ತಮ್ಮ ಮೊದಲ ಮಗಳ ಜತೆ ವಾಸ ಮಾಡುತ್ತಿದ್ದಾರೆ. ಇವರು ಕೂಡ ತಾಯಿ ಹಾಗೂ ಅಕ್ಕನ ಜತೆ ವಾಸವಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದರು ಎನ್ನುವುದಾಗಿ ತಿಳಿದು ಬಂದಿದ್ದು ಇಂದು ಮೃತರಾಗುರುವ ಮಾಹಿತಿಯನ್ನು ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಖಚಿತ ಪಡಿಸಿದ್ದು ಪಸ್ಮಿನಿಯವರ ಮೃತ ದೇಹ ಪತ್ತೆಯಾಗಬೇಕಿದೆ. ಇದನ್ನೂ ಓದಿ: ಮಾಡೆಲ್‌ ರಿಷ್ತಾ ಲಬೋನಿ ಶಿಮಾನಾ ಬ್ರೈನ್ ಹ್ಯಾಮ್ರೇಜ್‌ನಿಂದ ನಿಧನ

Share with Friends
author avatar
News Desk