
ಕಟ್ಟಡದಿಂದ ಜಿಗಿದು ಯುವಕ ಆತ್ಮಹತ್ಯೆ
ನೆಲಮಂಗಲ,(ಬೆಂ.ಗ್ರಾಮಾಂತರ),ಜು.7: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಿದರಕಲ್ಲು ಬಳಿಯ ಪ್ರೆಸ್ಟೀಜ್ ಜಿಂದಾಲ್ ಸಿಟಿಯಲ್ಲಿ ನಡೆದಿದೆ.

ಆದಿತ್ಯ ಅಯ್ಯರ್ (23) ಮೃತ ಯುವಕನಾಗಿದ್ದು,ಈತ ಪ್ರೆಸ್ಟೀಜ್ ಜಿಂದಾಲ್ ಅಪಾರ್ಟ್ ಮೆಂಟ್ ನ 27ನೇ ಫ್ಲ್ಯಾಟ್ ನಲ್ಲಿ ವಾಸವಾಗಿದ್ದ ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿಂದ ಆದಿತ್ಯ ಅಯ್ಯರ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಪೋಷಕರು ಮಲಗಿದ್ದ ವೇಳೆ ತನ್ನ ಫ್ಲ್ಯಾಟ್ ನ ಕಿಟಕಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ಆದಿತ್ಯ ಅಯ್ಯರ್ ನ ಮರಣೋತ್ತರ ಪರೀಕ್ಷೆ ನಡೆಯಿತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
