Latestರಾಜಕೀಯ | Politicsರಾಷ್ಟ್ರೀಯ-National

ಎನ್‌ಡಿಎ ಮೈತ್ರಿಕೂಟದ ಸಂಖ್ಯೆ 303ಕ್ಕೆ ಏರಿಕೆ!

ನವದೆಹಲಿ: ಒಟ್ಟು 293 ಸ್ಥಾನಗಳನ್ನು ಹೊಂದಿದ್ದ ಎನ್‌ಡಿಎ (NDA) ಮೈತ್ರಿಕೂಟದ ಸಂಖ್ಯೆ ಫಲಿತಾಂಶ ಬಂದ ಎರಡೇ ದಿನದಲ್ಲಿ 303ಕ್ಕೆ ಏರಿದೆ.

7 ಮಂದಿ ಪಕ್ಷೇತರ ಸಂಸದರು, ಸಣ್ಣ ಪಕ್ಷದ ಮೂವರು ಸಂಸದರು ಎನ್‌ಡಿಎ ಸರ್ಕಾರವನ್ನು ಬೆಂಬಲಿಸಿದ್ದಾರೆ. ಪ್ರಧಾನಿ ಮೋದಿ (PM Narendra Modi) ಅವರ ನಾಯಕತ್ವಕ್ಕೆ ನಾವು ಪೂರ್ಣ ಭರವಸೆ ಇಟ್ಟಿರುವುದಾಗಿ ಇವರು ಹೇಳಿರುವುದಾಗಿ ವರದಿಯಾಗಿದೆ.

https://youtu.be/EN_1kRxjo-4?si=fORNloISjS27NHRP

ಎನ್‌ಡಿಎ ಮೈತ್ರಿಕೂಟದ ಸಂಖ್ಯೆ ಏರಿಕೆಯಾಗಿರುವ ಬಗ್ಗೆ ಅಧಿಕೃತವಾಗಿ ಬಿಜೆಪಿ (BJP) ಕಡೆಯಿಂದ ಯಾವುದೇ ಪ್ರಕಟಣೆ ಬಂದಿಲ್ಲ. ಆದರೆ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ (Giriraj Singh) ಅವರ ಪೋಸ್ಟ್‌ನಿಂದ ಈ ಚರ್ಚೆ ಆರಂಭವಾಗಿತ್ತು. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಪಕ್ಷ ನಾಯಕನ ಸ್ಥಾನ ಫಿಕ್ಸ್‌

ಬುಧವಾರ ಎನ್‌ಡಿಎ ನಾಯಕರ ಸಭೆಯ ಬಳಿಕ ಗಿರಿರಾಜ್‌ ಸಿಂಗ್‌ ಅವರು ನಾಯಕರ ಫೋಟೋ ಪ್ರಕಟಿಸಿ ಎನ್‌ಡಿಎ 303 ಎಂದು ಬರೆದಿದ್ದರು. ಆದರೆ ಕೆಲ ಕ್ಷಣದಲ್ಲಿ ಈ ಪೋಸ್ಟ್‌ ಡಿಲೀಟ್‌ ಮಾಡಿ ಎನ್‌ಡಿಎ 3.0 ಎಂದು ಬರೆದು ಪೋಸ್ಟ್‌ ಮಾಡಿದ್ದರು.ಇದನ್ನೂ ಓದಿ:ರಾಷ್ಟ್ರ ರಾಜಧಾನಿಗೆ ಹೆಚ್ಚುವರಿ ನೀರು ಬಿಡುವಂತೆ ಸುಪ್ರೀಂ ಸೂಚನೆ

https://youtu.be/IrlpjBl1yQk?si=Vk0tcg2rL–dY6_N

ಎನ್‌ಡಿಎ 303 ಎಂದು ಬರೆದು ಡಿಲೀಟ್‌ ಮಾಡಿದ ಪೋಸ್ಟ್‌
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 293, ಇಂಡಿಯಾ 233, ಇತರರು 17 ಸ್ಥಾನ ಪಡೆದಿದ್ದಾರೆ. ಲೋಕಸಭೆಯಲ್ಲಿ ಬಹುಮತ ಪಡೆಯಲು ಸರ್ಕಾರಕ್ಕೆ 272 ಸ್ಥಾನಗಳ ಅಗತ್ಯವಿದೆ.ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ-ಬಿಜೆಪಿಯಿಂದ ನಾಗೇಂದ್ರ ರಾಜೀನಾಮೆಗೆ ಆಗ್ರಹ

https://youtu.be/bJ8aWd95gqc?si=pJk3A1TrfslaBQpI
Share with Friends
author avatar
News Desk