LatestWeatherಯಾದಗಿರಿರಾಜ್ಯ-Karnataka

ಯಾದಗಿರಿಯಲ್ಲಿ ಬಿಸಿಲಿಗೆ ಮೀನುಗಳ ಮಾರಣಹೋಮ

ಯಾದಗಿರಿ: ರಾಜ್ಯದೆಲ್ಲೆಡೆ ಮಳೆರಾಯನ (Rain) ಅಬ್ಬರ ಜೋರಾಗಿದ್ರೆ, ಯಾದಗಿರಿ (Yadagiri) ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ (Summer) ಹೆಚ್ಚಾಗಿದ್ದು, ಐತಿಹಾಸಿಕ ಕೆರೆಯಲ್ಲಿನ ಸಾವಿರಾರು ಮೀನುಗಳು (Fishes) ಸಾವನ್ನಪ್ಪಿವೆ.

ಯಾದಗಿರಿಯ ಹೃದಯ ಭಾಗದಲ್ಲಿರುವ ಲುಂಬಿನಿವನ ಕೆರೆಯಲ್ಲಿ ಘಟನೆ ನಡೆದಿದೆ. ಬಿಸಿಲಿನ ತಾಪಮಾನದಿಂದ ಆಕ್ಸಿಜನ್ ಕೊರತೆಯುಂಟಾಗಿ ಸಾವಿರಾರು ಮೀನುಗಳು ಕೆರೆಯಲ್ಲಿ ಸಾವನ್ನಪ್ಪಿವೆ. ಮಳೆ ಕೊರತೆಯಿಂದ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಇರೋ ನೀರೆಲ್ಲಾ ನೀಲಿ ಬಣ್ಣಕ್ಕೆ ತಿರುಗಿದೆ. ಹೀಗಾಗಿ ಬಿಸಿಲಿನ ತಾಪಮಾನ ಹೆಚ್ಚಾಗಿ, ಆಕ್ಸಿಜನ್ ಕೊರತೆಯುಂಟಾಗಿ ಮೀನುಗಳು ಸಾವನ್ನಪ್ಪಿವೆ. ಇದನ್ನೂ ಓದಿ: ಮದುವೆಗೆ ಹೆಣ್ಣು ಸಿಗದೆ ಮನನೊಂದು ಯುವಕ ನೇಣಿಗೆ ಶರಣು

https://youtu.be/CQ5L1vxidf0?si=-NQZmLDn1IfIx910

ಸಾವಿರಾರು ಮೀನುಗಳ ಸಾವಿನಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಮೀನುಗಾರರ ಬದುಕು ಸಂಕಷ್ಟಕ್ಕೀಡಾಗಿದೆ. ಇದನ್ನೂ ಓದಿ: ರೇವ್ ಪಾರ್ಟಿ ಪ್ರಕರಣ: ಹೇಮಾ, ಆಶಿ ರಾಯ್ ಬ್ಲಡ್ ರಿಪೋರ್ಟ್ ಪಾಸಿಟಿವ್

Share with Friends
author avatar
News Desk