Crime NewsEntertainmentLatest

ರೇವ್ ಪಾರ್ಟಿ ಪ್ರಕರಣ: ಹೇಮಾ, ಆಶಿ ರಾಯ್ ಬ್ಲಡ್ ರಿಪೋರ್ಟ್ ಪಾಸಿಟಿವ್

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹೊರವಲಯದಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿಯ ಪೈಕಿ 86 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಅದರಲ್ಲಿ ತೆಲುಗು ನಟಿಯರಾದ ಹೇಮಾ (Actress Hema) ಮತ್ತು ಆಶಿ ರಾಯ್ (Aashi Roy) ಬ್ಲಡ್ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ.

ಈ ಮೂಲಕ ತೆಲುಗು ನಟಿ ಹೇಮಾ ಮತ್ತು ಆಶಿ ರಾಯ್ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. 103 ಮಂದಿಯ ಪೈಕಿ 86 ಜನ ಡ್ರಗ್ಸ್ ಸೇವಿರುವುದು ದೃಢಪಟ್ಟಿದೆ. ಇದನ್ನೂ ಓದಿ: ಬಘೀರ’ ಚಿತ್ರದಲ್ಲಿ ರುಕ್ಮಿಣಿ ವಸಂತ್ ಪಾತ್ರ ಹೇಗಿದೆ?

ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆ ಮಾಡಿರುವ ಸುಳಿವು ಸಿಕ್ಕಿದೆ. ಎಂಡಿಎಂಎ, ಕೊಕೇನ್, ಹೈಡೋಗಾಂಜಾ ಪತ್ತೆಯಾಗಿದೆ. ಸದ್ಯ ಬ್ಲಡ್ ರಿಪೋರ್ಟ್ ನಲ್ಲಿ ಪಾಸಿಟಿವ್ ಬಂದವರಿಗೆ ಸಿಸಿಬಿ ನೋಟಿಸ್ ನೀಡಲು ಮುಂದಾಗಿದ್ದಾರೆ.

ವಾಸು ಎಂಬಾತನ ಬರ್ತಡೇ ಅಂಗವಾಗಿ Sunset To Sun Rise Victory ಶೀರ್ಷಿಕೆಯಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ನೂರರಿಂದ ನೂರೈವತ್ತು ಮಂದಿ ಜಮಾವಣೆಗೊಂಡಿದ್ದರು. ಇದನ್ನೂ ಓದಿ: ಚುಟು ಚುಟು ಬೆಡಗಿ ಆಶಿಕಾ ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ

Share with Friends
author avatar
News Desk