
15 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ
ಬೆಂಗಳೂರು: ಕರ್ನಾಟಕ ಸರ್ಕಾರ ಶನಿವಾರ 15 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಹಾಗೂ ಹೊಸ ಹುದ್ದೆಗಳ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ವರ್ಗಾವಣೆ ಮತ್ತು ನಿಯೋಜನೆಗಳು ನಡೆದಿವೆ.
ಹಿರಿಯ ಅಧಿಕಾರಿಗಳ ವರ್ಗಾವಣೆ
*ಹರಿಶೇಖರನ್ ಪಿ. – ಎಡಿಜಿಪಿ, ಕ್ರೈಮ್ಸ್ ಆ್ಯಂಡ್ ಟೆಕ್ನಿಕಲ್ ಸರ್ವೀಸಸ್ ಹುದ್ದೆಯಿಂದ ವರ್ಗಾವಣೆಗೊಂಡು, ಎಡಿಜಿಪಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಜವಾಬ್ದಾರಿ.
*ಎಂ. ನಂಜುಂಡಸ್ವಾಮಿ – ಎಡಿಜಿಪಿ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ಎಸ್ಡಿಆರ್ಎಫ್ನಿಂದ ಎಡಿಜಿಪಿ, ಕುಂದುಕೊರತೆಗಳು ಮತ್ತು ಮಾನವ ಹಕ್ಕುಗಳು ವಿಭಾಗಕ್ಕೆ ವರ್ಗಾವಣೆ.
*ದೇವಜ್ಯೋತಿ ರೇ – ಎಡಿಜಿಪಿ, ಕ್ರೈಮ್ಸ್ ಆ್ಯಂಡ್ ಟೆಕ್ನಿಕಲ್ ಸರ್ವೀಸಸ್, ಬೆಂಗಳೂರು ಹುದ್ದೆಗೆ ನೇಮಕ.
ರೇಂಜ್ ಮತ್ತು ನಗರ ಪೊಲೀಸ್ ಮುಖ್ಯಸ್ಥರ ಬದಲಾವಣೆ
*ಅಮಿತ್ ಸಿಂಗ್ – ಐಜಿಪಿ, ಪಶ್ಚಿಮ ವಲಯ, ಮಂಗಳೂರು ಹುದ್ದೆಯಿಂದ ಐಜಿಪಿ, ಕೆಎಸ್ಆರ್ಪಿಗೆ ವರ್ಗಾವಣೆ.
*ಬೊರಸೆ ಭೂಷಣ್ ಗುಲಾಬ್ರಾವ್ – ಬೆಳಗಾವಿ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ಡಿಐಜಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ನೇಮಕ.
*ಆರ್. ಚೇತನ್ – ಡಿಐಜಿ, ಪಶ್ಚಿಮ ವಲಯ, ಮಂಗಳೂರು ಹುದ್ದೆಗೆ ನೇಮಕ.
*ನಿಕಮ್ ಪ್ರಕಾಶ್ ಅಮೃತ್ – ಡಿಐಜಿ ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ನೇಮಕ.
ಜಿಲ್ಲಾ ಎಸ್ಪಿ ಹಾಗೂ ಪ್ರಮುಖ ಹುದ್ದೆಗಳಿಗೆ ನಿಯೋಜನೆ
*ಶಿವಪ್ರಕಾಶ್ ದೇವರಾಜು – ಎಸ್ಪಿ, ಆ್ಯಂಟಿ ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್.
*ಪದ್ಮಿನಿ ಸಾಹೂ – ಬೆಂಗಳೂರಿನ ಡಿಸಿಪಿ, ಆಡಳಿತ ಹುದ್ದೆಯಿಂದ ಎಸ್ಪಿ, ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ.
*ಕುಶಲ್ ಚೌಕ್ಸೆ – ಎಸ್ಪಿ, ಚಿಕ್ಕಬಳ್ಳಾಪುರ ಹುದ್ದೆಯಿಂದ ಡಿಸಿಪಿ, ಆಡಳಿತ, ಬೆಂಗಳೂರುಗೆ ವರ್ಗಾವಣೆ.
*ಆರ್. ಶ್ರೀನಿವಾಸ್ ಗೌಡ – ಎಸ್ಪಿ, ರಾಮನಗರದಿಂದ ಡಿಸಿಪಿ, ಸಿಟಿ ಕ್ರೈಂ ಬ್ರಾಂಚ್-1 (ಸಿಸಿಬಿ-1), ಬೆಂಗಳೂರುಗೆ ವರ್ಗಾವಣೆ.
*ರೋಹನ್ ಜಗದೀಶ್ – ಎಸ್ಪಿ, ಗದಗ್ನಿಂದ ಎಸ್ಪಿ, ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ)ಗೆ ವರ್ಗಾವಣೆ.
*ಮಿಥುನ್ ಎಚ್.ಎನ್. – ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ, ಮಂಗಳೂರು ನಗರದಿಂದ ಎಸ್ಪಿ, ಗದಗ್ಗೆ ವರ್ಗಾವಣೆ.
*ಸಾಹಿಲ್ ಬಗ್ಲಾ – ಡಿಸಿಪಿ, ಟ್ರಾಫಿಕ್ ಈಸ್ಟ್ ಡಿವಿಷನ್, ಬೆಂಗಳೂರಿನಿಂದ ಎಸ್ಪಿ, ಕೊಪ್ಪಳಕ್ಕೆ ವರ್ಗಾವಣೆ.
*ಡಾ. ಶಿವಕುಮಾರ್ – ಎಸ್ಪಿ, ಬಿಎಂಆರ್ಡಿಎ ಟಾಸ್ಕ್ ಫೋರ್ಸ್ನಿಂದ ಎಸ್ಪಿ, ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ.
ತಕ್ಷಣದಿಂದ ಜಾರಿಗೆ ಬರುವಂತೆ ಈ ವರ್ಗಾವಣೆ ಮತ್ತು ನಿಯೋಜನೆ ಆದೇಶಗಳನ್ನು ಸರ್ಕಾರ ಹೊರಡಿಸಿದೆ.
