Blogಬೆಳಗಾವಿ-Belagaviರಾಜ್ಯ-Karnataka

ಬಳ್ಳಾರಿ ಆಯ್ತು ಈಗ ಬೆಳಗಾವಿಯಲ್ಲೂ ಬಾಣಂತಿಯರು-ಶಿಶುಗಳ ಸರಣಿ ಸಾವು

ಬೆಳಗಾವಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಸುದ್ದಿಯಲ್ಲಿರುವಾಗಲೇ ಈಗ ಬೆಳಗಾವಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಆರು ತಿಂಗಳಲ್ಲಿ ಬರೊಬ್ಬರಿ 322 ಶಿಶುಗಳು ಹಾಗೂ 29 ಬಾಣಂತಿಯರು ಸಾವನ್ನಪ್ಪಿದ ಘಟನೆಯಿಂದ ಆರೋಗ್ಯ ಇಲಾಖೆ ಅಧಿಕಾರಿ ಹಾಗು ಸಿಬ್ಬಂದಿ ಹೈರಾಣಾಗಿದ್ದಾರೆ.

ಶಿಶುಗಳ ಮರಣಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಆಡಿಟ್ ಹಾಗೂ ತನಿಖೆ ನಡೆಸಲಾಗುತ್ತದೆ ಎಂದು ಬೆಳಗಾವಿ ಆರೋಗ್ಯ ಇಲಾಖೆಯ ಪ್ರಭಾರಿ ಡಿಹೆಚ್‌ಒ ಗಡೇದ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಆರೇ ತಿಂಗಳಲ್ಲಿ 322 ಶಿಶುಗಳ ಹಾಗೂ 29 ಬಾಣಂತಿಯರ ಸಾವು ಸಂಭವಿಸಿದ್ದು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಇದೊಂದು ಆಘಾತಕಾರಿ ವಿಚಾರ ತಕ್ಷಣವೇ ತನಿಖೆಯಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದರೆ ಸದನದಲ್ಲಿ ಈ ವಿಚಾರ ಪ್ರಸ್ಥಾಪಿಸುವದಾಗಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಒಂದೆಡೆ 322 ಶಿಶುಗಳ ಮರಣ ಇನ್ನೊಂದೆಡೆ 29 ಬಾಣಂತಿಯರ ಸಾವು ಇಲಾಖೆಯ ಕಾರ್ಯ ವೈಖರಿ ಮೇಲೆ ಸಂಶಯ ಹುಟ್ಟು ಹಾಕಿದೆ. ಕೆಲ ವೈದ್ಯರು ಈ ಅಂಕಿ – ಅಂಶ ಇನ್ನೂ ಹೆಚ್ಚು ಇದೆ ಎಂದು ಗುಸು ಗುಸು ಎನ್ನುತ್ತಿದ್ದಾರೆ.

Share with Friends
author avatar
News Desk