Crime NewsLatestಚಿಕ್ಕಬಳ್ಳಾಪುರ-Chikkaballapuraರಾಜ್ಯ-Karnataka

ಬೇಟೆಗೆ ತೆರಳಿದ್ದಾಗ ಮಿಸ್ ಫೈರ್ ಆಗಿ ಯುವಕ ದುರ್ಮರಣ

ಚಿಕ್ಕಮಗಳೂರು: ಬೇಟೆಗೆ (Hunting) ತೆರಳಿದ್ದಾಗ ಬಂದೂಕಿನಿಂದ (Gun) ಮಿಸ್ ಫೈರ್ (Miss Fire) ಆಗಿ ವ್ಯಕ್ತಿಯೊಬ್ಬನ ಎದೆಗೆ ಗುಂಡು (Bullet) ತಗುಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಉಳುವಾಗಿಲು ಗ್ರಾಮದಲ್ಲಿ ನಡೆದಿದೆ.

ಗುಂಡೇಟಿನಿಂದ ಮೃತಪಟ್ಟ ವ್ಯಕ್ತಿಯನ್ನು ಸಂಜಯ್ (35) ಎಂದು ಗುರುತಿಸಲಾಗಿದೆ. ಕೆರಮಕ್ಕಿ ಗ್ರಾಮದ ಸಂಜಯ್‌ ಸ್ನೇಹಿತರಾದ ನಿಸರ್ಗ ಮತ್ತು ಸುಮನ್ ಎಂಬವರ ಜೊತೆ ಕಾಡು ಹಂದಿಯ ಶಿಕಾರಿಗೆ ಹೋಗಿದ್ದರು. ಈ ವೇಳೆ ದರ‍್ಘಟನೆ ನಡೆದು ಸಂಕಜಯ್‌ ಉಸಿರು ಚೆಲ್ಲಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ನೇಹಿತರನ್ನು ವಿಚಾರನೇ ನಡೆಸುತ್ತಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ತನ್ನ ರ್ಡಾಲಿಂಗ್ ಬಗ್ಗೆ ಸುಳಿವು ಕೊಟ್ಟ ರ್ಡಾಲಿಂಗ್ ಪ್ರಭಾಸ್‌ – ಕೈ ಹಿಡಿಯುವ ಹುಡುಗಿ ಯಾರು?

https://youtu.be/dowiMBv6QX0?si=sqGQASutO1ZQjiaK

ಸಾಮಾನ್ಯಾವಾಗಿ ಚುನಾವಣೆ ಸಮಯದಲ್ಲಿ ಬಂದೂಕನ್ನು ಪೊಲೀಸ್‌ ಠಾಣೆಯಲ್ಲಿ ಠೇವಣೆ ಮಾಡಬೇಕು ಎಂಬ ನಿಯಮವಿದೆ. ಆದರೂ ಯುವಕರು ನಿಯಮವನ್ನು ಗಾಳಿಗೆ ತೂರಿ ಬಂದೂಕನ್ನು ಇಟ್ಟುಕೊಂಡಿದ್ದರು. ಅಲ್ಲದೇ ಅಕ್ರಮವಾಗಿ ಶಿಕಾರಿಗೆ ತೆರಳಿದ್ದರು. ಘಟನೆ ನಡೆದ ತಕ್ಷಣ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ನಿರ‍್ಗ ಬಿದ್ದು ಕೈ ಮೂಳೆ ಮುರಿದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಎಂಜಿನಿಯರಿಂಗ್‌ ವಿದ್ಯರ‍್ಥಿನಿಯ ಶವ ಪತ್ತೆ

https://youtu.be/mWARFGF6S7g?si=vfUfzFwZSzPkmSQs

ಸದ್ಯ ಘಟನೆ ಬಗ್ಗೆ ಮಿಸ್ ಫೈರ್ ಇಲ್ಲವೇ ಉದ್ದೇಶ ಪುರ್ವಕ ಕೊಲೆಯೋ ಇರಬಹುದು ಎಂದು ಸ್ಥಳಿಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: KSRTC ಬಸ್ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್

Share with Friends
author avatar
News Desk