Crime NewsLatestವಿದೇಶ-International

ಬ್ರಾ ಸೈಜ್ ಮೇಲೆ ಹುಡುಗಿಯರನ್ನು ಕಾಣುತ್ತಾರೆ – ಇಲಾನ್‌ ಮಸ್ಕ್‌ ವಿರುದ್ಧ ಮಾಜಿ ಉದ್ಯೋಗಿಗಳ ಆರೋಪ

ವಾಷಿಂಗ್ಟನ್: ಕಂಪನಿಯಲ್ಲಿ ಇದ್ದ ಲೈಂಗಿಕ ಕಿರುಕುಳ ವಾತಾವರಣ ವಿರುದ್ಧ ಧ್ವನಿ ಎತ್ತಿದ್ದಕ್ಕೆ ತಮ್ಮನ್ನು ಕೆಲಸದಿಂದ ಕಿತ್ತುಹಾಕಿದ್ದಾರೆ ಎಂದು ಸ್ಪೇಸ್​ಎಕ್ಸ್​ನ (Space X) ಎಂಟು ಮಾಜಿ ಮಹಿಳಾ ಉದ್ಯೋಗಿಗಳು (Women Employees) ಇಲಾನ್ ಮಸ್ಕ್ (Elon Musk) ವಿರುದ್ಧ ಕಾನೂನು ಮೊಕದ್ದಮೆ ಹಾಕಿದ್ದು, ಸಾಕಷ್ಟು ಲೈಂಗಿಕ ಆರೋಪಗಳು ಕೇಳಿಬಂದಿವೆ.

ಇಲಾನ್ ಮಸ್ಕ್ (Elon Musk) ವಿಶ್ವದ ಅತಿದೊಡ್ಡ ಶ್ರೀಮಂತರಲ್ಲಿ ಒಬ್ಬರು. ಪ್ರಚಂಡ ಬುದ್ಧಿಮತ್ತೆ ಮತ್ತು ಅಷ್ಟೇ ವಿವಾದಗಳಿಗೂ ಎಡೆಯಾಗಿರುವಂತಹ ವ್ಯಕ್ತಿ. ಒಂದಲ್ಲ, ಎರಡಲ್ಲ, ಹಲವು ಕಂಪನಿಗಳ ಒಡೆಯ. ‘ಕೆಲಸದ ಸ್ಥಳದಲ್ಲಿ ಇಲಾನ್ ಮಸ್ಕ್ ಅಶ್ಲೀಲವಾಗಿ ಮಾತನಾಡುತ್ತಾರೆ. ಹುಡುಗಿಯರನ್ನು ಅವರ ಬ್ರಾ ಸೈಜ್ ಮೇಲೆ ಅಳೆಯುತ್ತಾರೆ. ಈ ರೀತಿಯ ಮೃಗೀಯ ಸ್ಥಳದ ವಾತಾವರಣವನ್ನು ಯಾರಾದರೂ ಪ್ರಶ್ನಿಸಿದರೆ, ಬೇರೆ ಕಡೆ ಕೆಲಸ ನೋಡುವಂತೆ ಹೇಳಿ ಉದ್ಯೋಗದಿಂದಲೇ ತೆಗೆದುಹಾಕುತ್ತಾರೆ,’ ಎಂದು ಇವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮೂರನೇ ಬಾರಿ ಪ್ರಧಾನಿಯಾದ ಬಳಿಕ ಇಟಲಿಗೆ ಮೋದಿ ಮೊದಲ ಭೇಟಿ

https://youtu.be/uNnqF6b4wzw?si=Ww-I8em0y_CadsZ5

ಇವರ ಪ್ರಕಾರ ಇಲಾನ್ ಮಸ್ಕ್ ಮಾತ್ರವಲ್ಲ, ಸ್ಪೇಸ್​ಎಕ್ಸ್​ನ ಕೆಲ ಎಕ್ಸಿಕ್ಯೂಟಿವ್​ಗಳೂ ಕೂಡ ಅಶ್ಲೀಲ ನಡತೆ ತೋರುತ್ತಾರಂತೆ. ಈ ಎಕ್ಸಿಕ್ಯೂಟಿವ್​ಗಳ ಜೊತೆ ಸೇರಿಕೊಂಡು ಮಸ್ಕ್ ಕೂಡ ಮಹಿಳಾ ಉದ್ಯೋಗಿಗಳ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಾರೆ ಎಂದು ಮಹಿಳಾ ಉದ್ಯೋಗಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಅಗತ್ಯವೆನಿಸಿದರೆ ಸಿಐಡಿಯವರು ಯಡಿಯೂರಪ್ಪರನ್ನು ಬಂಧಿಸುತ್ತಾರೆ: ಪರಮೇಶ್ವರ್​

https://youtu.be/IoCu5rYZvOE?si=LsEx4t_YcLOyoJD0

ಟೆಸ್ಲಾ, ಸ್ಪೇಸ್​ಎಕ್ಸ್, ಎಕ್ಸ್ ಇತ್ಯಾದಿ ಸಂಸ್ಥೆಗಳ ಮುಖ್ಯಸ್ಥರಾಗಿರುವ ಇಲಾನ್ ಮಸ್ಕ್ ಅವರ ಲೈಂಗಿಕ ತಿಕ್ಕುಲತನ ಜಗಜ್ಜಾಹೀರಾಗಿದೆ. ಸ್ಪೇಸ್​ಎಕ್ಸ್​ನಲ್ಲಿ ಹಿಂದೆಯೂ ಅವರು ಮಹಿಳಾ ಉದ್ಯೋಗಿಗಳ ವಿರುದ್ಧ ಕೊಳಕಾಗಿ ವರ್ತಿಸಿದ್ದರು. ಅವರ ಈ ವರ್ತನೆ ಇದೇ ಮೊದಲಲ್ಲ. ಇದನ್ನೂ ಓದಿ: ಪೋಕ್ಸೊ ಕೇಸ್​ನಲ್ಲಿ ​ ಯಡಿಯೂರಪ್ಪ ಬಂಧಿಸಲು ಸಿಐಡಿ ಸಿದ್ಧತೆ

Share with Friends
author avatar
News Desk