
ಗದಗ ಜಿಲ್ಲೆಯಾದ್ಯಂತ ಭೀಕರ ಬರಗಾಲ
ಗದಗ, ಜು.12 : ಜಿಲ್ಲೆಯಾದ್ಯಂತ ಭೀಕರವಾದ ಬರಗಾಲದ ಛಾಯೆ ಆವರಿಸಿದ್ದು,ಬಿತ್ತನೆ ಮಾಡಿದ ಬೆಳೆಗಳು ಸಹ ಹಲವು ರೋಗಗಳಿಗೆ ತುತ್ತಾಗುತ್ತಿವೆ. ಇದರಿಂದಾಗಿ ರೈತರಿಗೆ ದಿಕ್ಕು ತೋಚದಂತಾಗಿದ್ದು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.
ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದ ಪರಿಣಾಮ ರೈತರು ಜಮೀನು ಹದಗೊಳಿಸಿ ಮೆಕ್ಕೆಜೋಳ ಹಾಗೂ ಹೆಸರು ಬೆಳೆ ಬಿತ್ತನೆ ಮಾಡಿದ್ದರು.
ಆದರೆ ಮೊದಲು ತುಂಬಾ ಚೆನ್ನಾಗಿದ್ದ ಬೆಳೆಗಳು ತದನಂತರ ಮಳೆ ಕೈ ಕೊಟ್ಟ ಪರಿಣಾಮ ಹಾಗೂ ಹವಾಮಾನ ವೈಪರಿತ್ಯದಿಂದ ಈಗ ಒಣಗುವ ಮೂಲಕ ರೋಗದ ಬಾಧೆಗೆ ತುತ್ತಾಗುತ್ತಿವೆ.
ಒಟ್ಟಾರೆಯಾಗಿ ಗದಗ ಜಿಲ್ಲೆಯ ರೈತರು ಮಳೆ ಇಲ್ಲದೇ ಕಂಗಾಲಾಗಿ ಬರಗಾಲದ ಛಾಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ನೆರವಿಗೆ ಧಾವಿಸಿ ಬರಗಾಲ ಘೋಷಣೆ ಮಾಡಿ ನೆರವು ನೀಡಬೇಕೆಂದು ರೈತರ ಆಗ್ರಹವಾಗಿದೆ.
