BlogLatestTop Storiesರಾಜ್ಯ-Karnataka

ರಾಜ್ಯದಲ್ಲಿ ಮತ್ತೆ ಮದ್ಯ ದರ ಪರಿಷ್ಕರಣೆ ಆಗುತ್ತಾ..?

ಬೆಂಗಳೂರು : ರಾಜ್ಯದಲ್ಲಿ ಮದ್ಯ ದರ ಪರಿಷ್ಕರಣೆ ಆಗುತ್ತಾ..? ಮದ್ಯ ದರ ಏರಿಕೆ ಆಗುತ್ತೋ‌..ಇಳಿಕೆ ಆಗುತ್ತೋ..? ರಾಜ್ಯದಲ್ಲಿ ಮದ್ಯ ದರ ಪರಿಷ್ಕರಣೆಗೆ ಮದ್ಯದಂಗಡಿ ಮಾಲೀಕರು ಪಟ್ಟು ಹಿಡಿದಿದ್ದಾರೆ.

ಜೂನ್ ,18 ,21 ರಂದು ಮದ್ಯ ದರ ಪರಿಷ್ಕರಣೆಗೆ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಮದ್ಯ ಏರಿಕೆ,ಇಳಿಕೆಗೆ ತಾತ್ಕಾಲಿಕ ತಡೆ ಹಾಕಿದ್ದ ಸರ್ಕಾರ ಇಲ್ಲಿಯವರೆಗೆ ಮದ್ಯದ ಹೊಸ ಪರಿಷ್ಕರಣೆ ಮಾಡಿರಲಿಲ್ಲ. ಇದರಿಂದ Quality ಬ್ರ್ಯಾಂಡ್ ಮದ್ಯ ಸರಬರಾಜು ಆಗದೆ ಸಂಕಷ್ಟ ಉಂಟಾಗಿತ್ತು.

ಮಾರುಕಟ್ಟೆಯಲ್ಲಿ ಮದ್ಯ ಸರಬರಾಜು ಆಗುವಂತೆ ದರ ಪರಿಷ್ಕರಣೆ ಮಾಡಿ, ಮದ್ಯ ದರ ನಿಗದಿ ವಿಳಂಬ ವಾದ್ರೆ ಹಳೆ ದರದಲ್ಲಿ ಸರಬರಾಜು ಮಾಡಲು ಉತ್ಪಾದಕರಿಗೆ ಸೂಚನೆ ನೀಡುವಂತೆ ಸಿಎಂ,ಅಬಕಾರಿ ಸಚಿವರು,ಆಯುಕ್ತರಿಗೆ ಪತ್ರ ಬರೆದ ಮದ್ಯದಂಗಡಿ ಮಾಲೀಕರ ಸಂಘ ಪಾತ್ರ ಬರೆದಿದೆ.

Share with Friends
author avatar
News Desk