BlogLatestTop Storiesಬೆಂಗಳೂರು-Bengaluru

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಆನ್ಲೈನ್ ಟಿಕೆಟ್ ವ್ಯವಸ್ಥೆ

ಬೆಂಗಳೂರು : ಸಸ್ಯಕಾಶಿ ಲಾಲ್ಬಾಗ್ ಪ್ರತಿವರ್ಷದಂತೆ ಈ ವರ್ಷವೂ ಹೆಸರಾಂತ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಈ ಬಾರಿ ಫಲಪುಷ್ಪ ಪ್ರದರ್ಶನದ ಟಿಕೆಟ್ ಆನ್ಲೈನ್ ನಲ್ಲಿ ಲಭ್ಯವಿದೆ. ಲ್‌ಬಾಗ್‌ಗೆ ಫಲಪುಷ್ಪ ಪ್ರದರ್ಶನಕ್ಕೆ ಬರುವವರು ಆನ್‌ಲೈನ್‌ನಲ್ಲೇ ಟಿಕೆಟ್ ಬುಕ್ ಮಾಡಿಕೊಂಡಲ್ಲಿ, ಮೊಬೈಲ್‌ನಲ್ಲಿ ಅದರ ಸ್ಕ್ರೀನ್ ಶಾರ್ಟ್ ತೋರಿಸಿ ಒಳ ಪ್ರವೇಶಿಸಬಹುದು.

ತೋಟಗಾರಿಕೆ ಇಲಾಖೆಯಿಂದ ಆನ್ನೈನ್ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಗಮನ ಸೆಳೆಯಲು ಇಲಾಖೆಯಿಂದ ಪ್ರಯತ್ನ ಮಾಡಲಾಗುತ್ತಿದೆ. ಟಿಕೆಟ್ ಖರೀದಿ ವೇಳೆ ನೂಕು ನುಗ್ಗಲು ತಪ್ಪಿಸಲು, ವೀಕೆಂಡ್ ನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆನ್ನೈನ್ ಟಿಕೆಟ್ ವ್ಯವಸ್ಥೆ ಕಲ್ಪಿಸಲಾಗಿದ್ದು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುವ ನಿರೀಕ್ಷೆ ಇದೆ.

ಸ್ವಾತಂತ್ರ್ಯ ದಿನಾಚರಣೆಯಂದು ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಈ ವೇಳೆ ಕೌಂಟರ್ಗಳಲ್ಲಿಟಿಕೆಟ್ ಪಡೆಯುವಾಗ ಉಂಟಾಗುವ ದಟ್ಟಣೆ ತಪ್ಪಿಸಲು ಹಾಗೂ ವೀಕ್ಷಕರು ಸುಲಭವಾಗಿ ಟಿಕೆಟ್ ಪಡೆಯಲು ಅನುಕೂಲವಾಗುವಂತೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆಮಾಡಲಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಪ್ರದರ್ಶನದ ಎಲ್ಲಾದಿನಗಳಲ್ಲೂ ಆನ್ಲೈನ್ನಲ್ಲಿ ಟಿಕೆಟ್ ಬುಕಿಂಗ್ಗೆ ವ್ಯವಸ್ಥೆಯಿದೆ. ಆದರೆ ಆಗಸ್ಟ್ 14 ಮತ್ತು 15ರಂದು ಹೆಚ್ಚಿನ ವೀಕ್ಷಕರು ಆಗಮಿಸುವ ನಿರೀಕ್ಷೆಯಿದೆ. ಅಂತಹ ಸಂದರ್ಭದಲ್ಲಿಜನರನ್ನು ನಿಯಂತ್ರಿಸಲು ಈ ವ್ಯವಸ್ಥೆಅನುಕೂಲವಾಗಲಿದೆ. ಹೀಗಾಗಿ ಲಾಲ್ಬಾಗ್ಗೆ ಫಲಪುಷ್ಪ ಪ್ರದರ್ಶನಕ್ಕೆ ಬರುವವರು ಆನ್ಲೈನ್ನಲ್ಲೇ ಟಿಕೆಟ್ ಬುಕ್ ಮಾಡಿಕೊಂಡಲ್ಲಿ, ಮೊಬೈಲ್ನಲ್ಲಿಅದರ ಸ್ಕ್ರೀನ್ ಶಾರ್ಟ್ ತೋ ರಿಸಿ ಒಳ ಪ್ರವೇಶಿಸಬಹುದು.

Share with Friends
author avatar
News Desk