BlogLatestTop Storiesಬೆಳಗಾವಿ-Belagaviರಾಜ್ಯ-Karnataka

ಪ್ರೆಶರ್ ಕುಕ್ಕರ್ ಸ್ಪೋಟ : ಇಬ್ಬರು ಗಂಭೀರ, ಹಲವರಿಗೆ ಗಾಯ

ಬೆಳಗಾವಿ: ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಬಂದವರ ಪೈಕಿ ಪಟ್ಟಣದ ಹೊಟೇಲ್ ರೂಮನಲ್ಲಿ‌ ಕುಕ್ಕರ್ ಸ್ಪೋಟ ಗೊಂಡು ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದಾರೆ.ಬೆಂಗಳೂರು, ಯಾದಗಿರಿ ಮೂಲದಿಂದ‌ ಯಲ್ಲಮ್ಮ ದೇವಿ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳ ಪೈಕಿ ಆರು ಜನರಿಗೆ ಗಾಯವಾದ ಪ್ರಾಥಮಿಕ ಮಾಹಿತಿ ಸಿಕ್ಕಿದೆ.

ದೇವಿ ನೈವೇದ್ಯಕ್ಕಾಗಿ ಹೋಳಿಗೆ ತಯಾರಿಸುವಾಗ ಪ್ರೆಶರ್ ಕುಕ್ಕರಗ ಸ್ಪೋಟಿಸಿದೆ. ಕುಕ್ಕರ್ ಸ್ಪೋಟಗೊಂಡಿದ್ದರಿಂದ ಆರು ಜನರಿಗೆ ಗಾಯವಾದರೆ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಗಂಭೀರ ಗಾಯಗೊಂಡವರನ್ನು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.

ಕುಕ್ಕರ್ ಸ್ಪೋಟ ಪ್ರಕರಣ ಹಲವು ವ್ಯತಿರಿಕ್ತ ವಿಚಾರಗಳನ್ನು ಸೃಷ್ಟಿಸಿತ್ತು. ಸದ್ಯಕ್ಕೆ ಇದು ಅಡುಗೆಯ ಪ್ರೆಶರ್ ಕುಕ್ಕರ್ ಎಂಬುವುದು ಸ್ಪಷ್ಟಗೊಂಡಿದೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ಡಾ. ಭೀಮಾಶಂಕರ ಗುಳೇದ ಹಾಗೂ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Share with Friends
author avatar
News Desk