Crime NewsLatestಯಾದಗಿರಿರಾಜ್ಯ-Karnataka

ಈಜಲು ಹೋದವರು ಕೆರೆ ಪಾಲು

ಯಾದಗಿರಿ: ಬಿಸಿಲ ಬೇಗೆಗೆ ತಾಪ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಈಜಾಡಲು ಹೋಗಿದ್ದ ಮೂವರು ಬಾಲಕರು ಧಾರುಣ ಸಾವನ್ನಪ್ಪಿದ (Died) ಘಟನೆ ಜಿಲ್ಲೆಯ ಸುರಪುರ (Sarapura) ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ.

ಹೈಯಾಳಪ್ಪ(11), ಶರಣಬಸವ(10) ಹಾಗೂ ಅನಿಲ(10) ಮೃತ ದುರ್ದೈವಿಗಳು. ಮೃತರಲ್ಲಿ ಇಬ್ಬರು ನಗನೂರು ಗ್ರಾಮದವರಾದರೆ, ಇನ್ನೋರ್ವ ಬಾಲಕ ಖಾನಾಪುರ ಗ್ರಾಮದ ನಿವಾಸಿ. ಮೃತ ಮೂವರು ಬಾಲಕರ ಶವವನ್ನು ಸ್ಥಳೀಯರು ಹೊರೆತೆಗೆದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮುಖಂಡರು ಅವರ ಹುಡುಗರಿಗೆ ಮೊದಲು ಬುದ್ದಿ ಹೇಳಬೇಕು: ಮುತತಾಲಿಕ್

https://youtu.be/CVHlLryW8k8?si=W-m5lbXcuAqUF1WG

ಈ ಕುರಿತು ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share with Friends
author avatar
News Desk