EntertainmentLatestಚುನಾವಣೆ-Electionರಾಜಕೀಯ | Politicsರಾಜ್ಯ-Karnatakaಸ್ಯಾಂಡಲ್​ವುಡ್-Sandalwood

ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಬಂದ ಕಾರಣ ತಿಳಿಸಿದ ಡಿ .ಬಾಸ್

ತಾನು ಚಂದ್ರು ಅವರ ಪರವಾಗಿ ಯಾಕೆ ಮತ ಪ್ರಚಾರ ಮಾಡುತ್ತಿದ್ದೇನೆ ಎನ್ನುವುದನ್ನು ಇದೀಗ ದರ್ಶನ್ (Darshan) ಅವರು ಸ್ಪಷ್ಟ ಪಡಿಸಿದ್ದಾರೆ.

ಈ ಹಿಂದೆ ಸುಮಲತಾ ಅಂಬರೀಶ್ (Sumalatha Ambareesh)ಅವರು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸಚಿವ ಚೆಲುವರಾಯ ಸ್ವಾಮಿ (Cheluvarayaswamy) ಅವರು ಸಾಕಷ್ಟು ಸಹಾಯ ಮಾಡಿದ್ದರಂತೆ. ಆದರ ಋಣ ತೀರಿಸಲು ಬಂದಿರುವುದಾಗಿ ಇಂದು ದರ್ಶನ್ ಬಹಿರಂಗವಾಗಿ ಇಂದು ಮಂಡ್ಯ ಲೋಕಸಭಾ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಪ್ರಚಾರದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ವಿಜಯ್ ಜೊತೆ ರಾಜಕೀಯಕ್ಕೆ ಬರೋಕೆ ಸಜ್ಜಾದ ವಿಶಾಲ್

https://youtu.be/CVHlLryW8k8?si=PgGT2bW9RQUxD-37

ತಾನು ಸದಾ ಅಮ್ಮನ ಪರವಾಗಿ ಇರುತೇನೆ ಎಂದು ಹೇಳುತ್ತಾ ಬಂದಿದ್ದ ನಟ ದರ್ಶನ್ ಏಕಾಏಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಇಳಿದಿದ್ದ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಸುಮಲತಾ ಅಂಬರೀಶ್ ಬಿಜೆಪಿ ಸೇರಿಕೊಂಡಿದ್ದರೂ, ದರ್ಶನ್ ಅವರು ಮಾತ್ರ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡಿದ್ದು ಸಾವಿರಾರು ಅನುಮಾನಕ್ಕೆ ಕಾರಣವಾಗಿತ್ತು. ಸದ್ಯ ಅದಕ್ಕೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ: ಮುರುಘಾ ಶ್ರೀಗೆ ಮತ್ತೆ 4 ತಿಂಗಳು ಜೈಲೇ ಗತಿ

https://youtu.be/8LPX6mzVP_s?si=TeMeRaoJpwe70VmM

ಸದ್ಯ ದರ್ಶನ್ ಮಂಡ್ಯ ಜೆಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ತಮ್ಮ ಕಯಗೆ ಸರ್ಜರಿ ಆಗಿದ್ದರೂ ಯಾವುದನೂ ಲೆಕ್ಕಿಸದೇ ಮತಯಾಚನೆ ಮಾಡುತ್ತಿದ್ದಾರೆ. ಜೊತೆಗೆ ಡಿ.ಕೆ ಸುರೇಶ್ ಪರವೂ ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಪೂಜಾ ರಮೇಶ್ ಬಿಜೆಪಿಗೆ ಸೇರ್ಪಡೆ

Share with Friends
author avatar
News Desk