BlogTop StoriesVideosರಾಜ್ಯ-Karnataka

ಇನ್ನುಮುಂದೆ QR ಕೋಡ್ ಸ್ಕಾನ್ ಮಾಡಿದರೆ ಸಾಕು ಸಿಗುತ್ತೆ ಚಾಲಕ ಹಾಗೂ ವಾಹನದ ಡಿಟೆಲ್ಸ್

ಬೆಂಗಳೂರು : ಇನ್ನುಮುಂದೆ QR ಕೋಡ್ ಸ್ಕಾನ್ ಮಾಡಿದ್ರೆ ಸಿಗಲಿದೆ ಚಾಲಕ ಹಾಗೂ ವಾಹನದ ಸಂಪೂರ್ಣ ಡಿಟೆಲ್ಸ್, ಜೊತೆಗೆ ವಾಹನದ ಮೇಲೆ ಯಾವುದೇ ಕೇಸ್ ಇದ್ರೂ ಕ್ಷಣಾರ್ಧದಲ್ಲಿ ಮಾಹಿತಿ ಲಭ್ಯವಾಗಲಿದೆ. ಹೌದು ದೇಶದಲ್ಲೆಡೆ ಡಿಎಲ್.ಆರ್ಸಿ ಕ್ಯೂ ಆರ್ ಕೋಡ್ ಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ನೀಡಿದೆ.

ಸೆಪ್ಟೆಂಬರ್ ನಿಂದಲೇ ಮೈಕ್ರೋ ಚಿಪ್ ಜೊತೆಗೆ ಕ್ಯೂ ಆರ್ ಕೋಡ್ ಅಳವಡಿಸಲಾದ ಸ್ಮಾರ್ಡ್ ಕಾರ್ಡ್ ವಿತರಿಸಲು ರಾಜ್ಯ ‌ಸಾರಿಗೆ ಇಲಾಖೆ ಸಿದ್ದತೆ ನಡೆಸಿದೆ. ಈಗಾಗಲೇ ಡಿಎಲ್.ಆರ್ಸಿ ಮುದ್ರಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲು ಖಾಸಗಿ ಸಂಸ್ಥೆಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ.

ಈವರೆಗೆ ಇದ್ದ ಡಿಎಲ್ ನಲ್ಲಿ ಚಾಲಕನ ಹೆಸರು,ಜನ್ಮ ದಿನಾಂಕ,ಚಾಲಕನ ವಿಳಾಸ,ರಕ್ತದ ಗುಂಪು ವಿವರಗಳು ಇರುತ್ತಿದ್ದವು. ಇನ್ನೂ ಈ ಡಿಜಿಟಲ್ ಕ್ಯೂಆರ್ ಕೋಡ್ ಡಿಎಲ್ ನಲ್ಲಿ ಏನೆಲ್ಲಾ ಹೊಸ ಮಾಹಿತಿ ಸಿಗಬಹುದು ಅಂತಾ ನೋಡೋದಾದ್ರೆ ಚಾಲಕನ ಹೆಸರು, ವಿಳಾಸ, ಜನ್ಮ ದಿನಾಂಕ, ಬ್ಲಡ್ ಗ್ರೂಪ್, ಸೇರಿದಂತೆ ಅಂಗಾಂಗ ದಾನಿಯಾಗಿದ್ದಾರಯೇ ಎಂಬುದನ್ನು ಉಲ್ಲೇಖಿಸಲಾಗುತ್ತದೆ.

ಚಾಲಕನ ಮೊಬೈಲ್ ನಂಬರ್ ಜೊತೆಗೆ ರಕ್ತ ಸಂಭಂದಿಯ ನಂಬರ್ ಗಳನ್ನು ನಮೂದಿಸಲಾಗಿರುತ್ತದೆ. ಇನ್ನೂ ಕ್ಯೂ ಆರ್ ಕೋಡ್ ಸ್ಕಾನ್ ಮಾಡಿದ್ರೆ ವಾಹನದ ಡಿಟೆಲ್ ಮತ್ತು ಚಾಲಕನ ಕಂಪ್ಲೀಟ್ ವಿವರಗಳು ಸಿಗಲಿವೆ.

Share with Friends
author avatar
News Desk