BlogLatestರಾಷ್ಟ್ರೀಯ-National

ರಷ್ಯಾ ಸೇನೆಗೆ ಸರಬರಾಜಾಗುತ್ತಿವೆ ಭಾರತದಲ್ಲಿ ತಯಾರಾದ ಬೂಟುಗಳು

ಪಾಟ್ನಾ: ರಷ್ಯಾಕ್ಕೆ ಬೂಟುಗಳನ್ನು ರಫ್ತು ಮಾಡುವ ಅತಿದೊಡ್ಡ ಸಂಸ್ಥೆಗಳಲ್ಲಿ ಹಾಜಿಪುರದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಒಂದಾಗಿದೆ. ಈ ಮೂಲಕ ಭಾರತದ ಬೂಟುಗಳ ಬೇಡಿಕೆ ಹೆಚ್ಚಾಗಿದೆ,

ರಷ್ಯಾ ಮತ್ತು ಉಕ್ರೇನ್ ನಡುವೆ ದೀರ್ಘ ಕಾಲದ ಯುದ್ಧ ಮುಂದುವರಿದಿದ್ದು ರಷ್ಯಾ ಸೈನಿಕರು ಭಾರತದಲ್ಲಿ ತಯಾರಾದ ಧರಿಸುವ ಬೂಟುಗಳು ಧರಿಸುತ್ತಿದ್ದಾರೆ. ಈ ಬೂಟುಗಳನ್ನು ಬಿಹಾರದ ಹಾಜಿಪುರದಲ್ಲಿ ತಯಾರಿಸಲಾಗುತ್ತದೆ.

ರಷ್ಯಾಕ್ಕೆ ಬೂಟುಗಳನ್ನು ರಫ್ತು ಮಾಡುವ ಅತಿದೊಡ್ಡ ಸಂಸ್ಥೆಗಳಲ್ಲಿ ಹಾಜಿಪುರದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಒಂದಾಗಿದೆ. ಈ ಶೂಗಳ ತೂಕವು ಹಗುರವಾಗಿರುತ್ತದೆ. ಇವುಗಳನ್ನು ಧರಿಸುವುದರಿಂದ ಭಾರ ಎನಿಸುವುದಿಲ್ಲ. ಇವುಗಳಿಗೆ ಬಳಸುವ ಸೋಲ್ ಕೂಡ ವಿಶಿಷ್ಟವಾಗಿದೆ. ಹೀಗಾಗಿ ರಷ್ಯಾದಲ್ಲಿ ಈ ಬೂಟುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎನ್ನಲಾಗಿದೆ.

https://sampoornanews.in/gauri-lankesh-murder-case-karnataka-high-court-grants-bail-to-3-accused

ಕಳೆದ ವರ್ಷ ರೂ.100 ಕೋಟಿ ರೂ.ಮೌಲ್ಯದ 1.5 ಮಿಲಿಯನ್ ಜೋಡಿ ಶೂಗಳನ್ನು ರಫ್ತು ಮಾಡಲಾಗಿದೆ. ಮುಂದಿನ ವರ್ಷ ಶೇ.50ರಷ್ಟು ಹೆಚ್ಚಿಸುವ ಉದ್ದೇಶದಿಂದ ಮುನ್ನಡೆಯುತ್ತಿದ್ದೇವೆ ಎಂದು ಸಂಸ್ಥೆ ಮುಖ್ಯಸ್ಥ ಸಾಹಿಬ್ ಕುಮಾರ್ ಹೇಳಿದ್ದಾರೆ.

Share with Friends
author avatar
News Desk