
ಪಾಕಿಸ್ತಾನದವರ ಜೊತೆ ಸಂಪರ್ಕದಲ್ಲಿದ್ದವನ ಬಂಧನ.
ದೊಡ್ಡಬಳ್ಳಾಪುರ : ಕೌಂಟರ್ ಇಂಟಲಿಜೆನ್ಸ್ ಸೆಲ್ ಮತ್ತು ಸೆಂಟ್ರಲ್ ಐಬಿ ಅಧಿಕಾರಿಗಳ ಮಾಹಿತಿ ಮೆರೆಗೆ ಬಂಧನ.ಪಾಕಿಸ್ತಾನಿ ಗ್ಯಾಂಗ್ ಸ್ಟರ್ಗಳ ಜೊತೆ ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಸಂರ್ಪಕ ದಲ್ಲಿದ್ದ ಆರೋಪಿ.ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ ( 28 ) ಬಂಧಿತ ಆರೋಪಿ.
ಪಾಕಿಸ್ತಾನದ ಶಾಜದ್ ಬುಟ್ಟಿ ನೆಟವರ್ಕ್ ಗ್ಯಾಂಗ್ ನ ಇನ್ಸ್ಟಾಗ್ರಾಂ ಅಕೌಂಟ್. ಗಣ್ಯ ವ್ಯಕ್ತಿಗಳು ದೊಡ್ಡ ದೊಡ್ಡ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಪಾಕಿಸ್ತಾನಿ ಗ್ಯಾಂಗ್. ದೊಡ್ಡಬಳ್ಳಾಪುರ ನಗರ ಪೊಲೀಸರಿಂದ ಪಾಕಿಸ್ತಾನ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿಯ ಬಂಧನ.
ಇನ್ಸ್ಟಾಗ್ರಾಂ ನ Hammadmemon333 ಅನ್ನೋ ಪಾಕಿಸ್ತಾನ್ ಗ್ಯಾಂಗ್ ನ ಅಕೌಂಟ್ ನಲ್ಲಿ ಸಂಪರ್ಕದಲ್ಲಿದ್ದ ಆರೋಪಿ.ತನ್ನ ಆಧಾರ್ ಕಾರ್ಡ್ ಎಲ್ಲ ಕೊಟ್ಟು ಅಕೌಂಟ್ ಗೆ ಲಾಗಿನ್ ಆಗಿದ್ದ ಆರೋಪಿ.ಕಳೆದ 2 ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್ ನ ಜೊತೆ ಇನ್ಸ್ಟಾಗ್ರಾಂ ನಲ್ಲಿ ಸಂಪರ್ಕದಲ್ಲಿದ್ದ ಆರೋಪಿ.
ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಆಪರೇಟ್ ಮಾಡಿಸಿ ಕೆಲಸ ಮಾಡಿಸುವ ಪಾಕಿಸ್ತಾನ ಪಾತಾಕಿಗಳ ಗ್ಯಾಂಗ್.ದೊಡ್ಡಬಳ್ಳಾಪುರದ ಇಸ್ಲಾಂಪುರ ಮನೆಯಲ್ಲಿದ್ದ ವೇಳೆ ಆರೋಪಿಯನ್ನ ಬಂಧಿಸಿದ ಪೊಲೀಸರು.ಎಸಿ ರಿಪೇರಿ ಕೆಲಸ ಮಾಡುತ್ತಾ ಬೆಂಗಳೂರಿನ ಮಸೀದಿಯಲ್ಲಿ ಪಾಠ ಮಾಡ್ತಿದ್ದ ಆರೋಪಿ.ಗ್ಯಾಂಗ್ ಹೇಳಿದಂತೆ ಕೇರಳ ಮತ್ತು ದೆಹಲಿಗೆ ಹೋಗಿ ಟ್ರೈನಿಂಗ್ ಸಹ ಪಡೆದುಕೊಂಡು ಬಂದಿದ್ದ ಆರೋಪಿ.
ಹೆಚ್ವಿನ ವಿಚಾರಣೆಗಾಗಿ ಆರೋಪಿಯನ್ನ ವಶಕ್ಕೆ ಪಡೆದು ತನಿಖೆ. ಆರೋಪಿಯ ವಿರುದ್ದ ಬಿಎನೆಸ್ 113 (3) ( 197( 2 ) ಅಡಿ ಪ್ರಕರಣ ದಾಖಲು.ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ.
