
ಬರ ಘೋಷಣೆಗಾಗಿ ನರಗುಂದ ಪಟ್ಟಣ ಬಂದ್
ಗದಗ : ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳನ್ನ ತೀವ್ರ ಬರ ಎಂದು ಘೋಶಿಸುವಂತೆ ಆಗ್ರಹ ಮಾಡಿ ಮಹದಾಯಿ ಮಹಾವೇದಿಕೆ ಹಾಗೂ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ನರಗುಂದ ಪಟ್ಟಣದ ಬಾಬಾಸಾಹೇಬರ ಮೂರ್ತಿಯಿಂದ ಮಹದಾಯಿ ಮಹಾವೇದಿಕೆವರೆಗೂ ಪ್ರತಿಭಟನೆಮಾಡಿ ಜಾಥಾ ಬರ ಘೋಶಿಸಿ, ಬರ ಪರಿಹಾರವನ್ನು ಶೀಘ್ರ ಬಿಡುಗಡೆಗೊಳಿಸಲು ಆಗ್ರಹ ಮಾಡಿದ್ದಾರೆ.
ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರ ಘೋಷಣೆ ಮಾಡಿದ್ರಿ ಆದ್ರೆ ಉಳಿದ ತಾಲೂಕುಗಳೂ ಸಹ ಬರ ಪೀಡಿತವಾಗಿವೆ.ಮಲಪ್ರಭಾ ಅಚ್ಚುಕಟ್ಟು ಜಿಲ್ಲೆಗಳಲ್ಲಿ ತೀವ್ರ ಬರ ತಾಂಡವ ಆಡುತ್ತಿದೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಶಿಸಿದ್ದಾರೆ.
ಮಳೆ ಮಾಪನಗಳು ಕೆಟ್ಟು ಹೋಗಿವೆ ಯಾವ ಆಧಾರದ ಮೇಲೆ ಬರ ಪಟ್ಟಿಯಿಂದ ನಮ್ಮನ್ನ ಕೈ ಬಿಟ್ಟಿದ್ದೀರಿ ನೀವು ಬರ ಘೋಷಣೆ ಯಾಕೆ ಮಾಡಿಲ್ಲ ಎಂದು ಕಿಡಿ ಕಾರಿದ್ದಾರೆ.ಬೆಳೆ ಪರಿಹಾರ, ಬೆಳೆ ವಿಮೆ ಪರಿಹಾರ ಒದಗಿಸಬೇಕು ಸಾಲ ವಸೂಲಾತಿ ನಿಲ್ಲಿಸಬೇಕು, ಸಾಲ ಮನ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ..
ಜನ, ಜಾನುವಾರುಗಳಿಗೆ ನೀರು ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹನೀಡಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಹಾಗೂ ಸರಿಯಾಗಿ ಬರ ವೀಕ್ಷಣೆ ಮಾಡಿ ತೀವ್ರ ಬರ ಘೋಶಿಸಬೇಕು99% ಬರ ಇದೆ, ರೈತರು ಬೆಳೆದ ಬೆಳೆ ಹಾನಿಯಾಗಿದೆ.
ಇದು ಬಂಡಾಯದ ನಾಡು, ರೈತರು ರೊಚ್ಚಿಗೆದ್ರೆ ನಿಮ್ಮ ಸರ್ಕಾರ ನಡೆಯೋದಿಲ್ಲ ನರಗುಂದ ಬಂದ್ ಕರೆ ಮೂಲಕ ಕೆಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಂಕರ ಅಂಬಲಿ, ಬಸವರಾಜ ಸಾಬಳೆ, ಆರ್ ಎನ್ ಪಾಟೀಲ್, ಚನ್ನು ನಂದಿ ಸೇರಿದಂತೆ ನೂರಾರು ರೈತರು, ರೈತ ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರೆ.
