
ಶ್ರಾವಣ ಮಾಸದ ಸಂಭ್ರಮಕ್ಕೆ ಅದ್ಧೂರಿ ತೆರೆ..!
ಬಾಗಲಕೋಟೆ : ಉತ್ತರ ಕರ್ನಾಟಕದಲ್ಲಿ ಅದರಲ್ಲಿ ವಿಶೇಷವಾಗಿ ಶ್ರಾವಣ ಮಾಸದ ಕಾರ್ಯಕ್ರಮವನ್ನು ಒಂದು ತಿಂಗಳ ಶಿವನ ಜ್ಞಾನದಲ್ಲಿ ಮುಳುಗಿರುವ ಭಕ್ತ ಸಮೂಹವಿದು ಶ್ರಾವಣ ಮಾಸದ ಮುಕ್ತಾಯ ಸಮಾರಂಭವನ್ನು ಅದ್ದೂರಿಯಾಗಿ ಅಣ್ಣ ಪ್ರಸಾದವನ್ನು ಮಾಡುವ ಸಮುದಾಯವಿದು.
ಅದರಲ್ಲೂ ಬಾದಾಮಿ ನಗರದಲ್ಲಿ ಬೋವಿ ಮತ್ತು ಮೋಚಿ ಸಮಾಜದವರು ಅನ್ನಪ್ರಸಾದವನ್ನು ಏರ್ಪಡಿಸಿದ್ದು ಬಹಳ ವಿಶೇಷ ಈ ಒಂದು ಸುಂದರವಾದ ಶ್ರಾವಣ ಮಾಸದ ಕೊನೆ ಮುಕ್ತಾಯ ಸಮಾರಂಭವನ್ನು ಶಿವನ ಜ್ಞಾನದೊಂದಿಗೆ ಈ ನಮ್ಮ ರಾಜ್ಯ ರಾಷ್ಟ್ರಕ್ಕೆ ಯಾವುದೇ ತರ ಗಂಡಾಂತರಗಳು ಬರದಿರುವಂತೆ ಈ ಒಂದು ಶಿವನ ಜ್ಞಾನ ಆಚರಿಸುತ್ತಾರೆ.
ಈ ಶ್ರಾವಣ ಮಾಸಕ್ಕೆ ಹಲವು ಮಠಾಧೀಶರು ಸ್ವಾಮೀಜಿಯವರ ಆಗಮಿಸಿ ಅಷ್ಟೇ ಅಲ್ಲದೆ ಬಾದಾಮಿ ಮತ ಕ್ಷೇತ್ರದ ಶಾಸಕರು ಭೀಮಸೇನ್ ಚಿಮ್ಮನಕಟ್ಟಿ ಇವರು ಕೂಡ ತಮ್ಮ ಸಹಕಾರದಿಂದ ಈ ಒಂದು ಶ್ರಾವಣ ಮಾಸದ ಮುಕ್ತಾಯ ಸಮಾರಂಭಕ್ಕೆ ಅನ್ನಪ್ರಸಾದ ವ್ಯವಸ್ಥೆಯಲ್ಲಿ ಭಾಗಿಯಾಗಿ ಇಂತಹ ಸಮಾಜ ಯಾವತ್ತು ಮುಂದೆ ಬರಬೇಕು.
ಸಮಾಜಕ್ಕೆ ರಾಜ್ಯ ರಾಷ್ಟ್ರಕ್ಕೆ ಒಳ್ಳೆಯದಾಗುವುದಕ್ಕೆ ಶಾಸಕರು ಕೂಡ ಇಂಥ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಾವೆಲ್ಲ ಸಮಾನರು ಎಂದು ಸಮಾಜಕ್ಕೆ ತಿಳುವಳಿಕೆ ಹೇಳುತ್ತಾ ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇಂತಹ ಸಣ್ಣ ಸಮಾಜಗಳು ಒಂದುಗೂಡಿ ಯಾವುದೇ ತರಭೇದಭಾವಗಳಿಲ್ಲದೆ ಇಂಥ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವವರಿಗೆ ಶಾಸಕರು ಮನತುಂಬಿ ಇಂತಹ ಸಮಾಜಗಳಿಗೆ ಶುಭ ಹಾರೈಸಿದರು.
