
ಕೆಆರ್ ಮಾರ್ಕೆಟ್‌ನ 800ಕ್ಕೂ ಹೆಚ್ಚು ಮಳಿಗೆ ಮಾಲೀಕರಿಗೆ ಪಾಲಿಕೆ ನೋಟಿಸ್
ಬೆಂಗಳೂರು.ಅ.9- ನಗರದ ಕೆಆರ್ ಮಾರ್ಕೆಟ್‌ನ 800ಕ್ಕೂ ಹೆಚ್ಚು ಮಳಿಗೆ ಮಾಲೀಕರಿಗೆ ಬಿಬಿಎಂಪಿ ಬಾಡಿಗೆ ಬಾಕಿ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ. 2014ರಿಂದ ಹಲವು ಮಳಿಗೆಗಳ ಬಾಡಿಗೆ ಪಾವತಿಯಾಗದೆ ಉಳಿದಿದ್ದು, ಒಟ್ಟು ಬಾಕಿ ಮೊತ್ತ ಸುಮಾರು 12 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಬಾಕಿ ಬಾಡಿಗೆ ಮೊತ್ತವನ್ನು ಪಾವತಿಸಲು ಮಳಿಗೆ ಮಾಲೀಕರಿಗೆ 10 ದಿನಗಳ ಗಡುವು ನೀಡಲಾಗಿದೆ. ನಿಗದಿತ ಅವಧಿಯೊಳಗೆ ಬಾಕಿ ಹಣ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಕೆ ನೀಡಿದೆ.
ಕೆಆರ್ ಮಾರ್ಕೆಟ್‌ನ ಹಲವು ಮಳಿಗೆಗಳಿಗೆ ತಿಂಗಳಿಗೆ ಕೇವಲ 1,000ರಿಂದ 2,000ರವರೆಗೆ ಬಾಡಿಗೆ ನಿಗದಿಯಾಗಿದ್ದರೂ, ವರ್ಷಗಳಿಂದ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಬಾಕಿ ಮೊತ್ತ ಕೋಟ್ಯಂತರ ರೂಪಾಯಿಗೆ ತಲುಪಿದೆ. ಇದರಿಂದ ಪಾಲಿಕೆಯ ಆದಾಯಕ್ಕೆ ನಷ್ಟ ಉಂಟಾಗುತ್ತಿರುವ
ಹಿನ್ನೆಲೆಯಲ್ಲಿ ಬಾಕಿ ಬಾಡಿಗೆ ವಸೂಲಿ ಕಾರ್ಯಕ್ಕೆ ವೇಗ ನೀಡಲಾಗಿದೆ.
ಬಾಕಿ ಹಣ ವಸೂಲಿ ಮಾಡುವುದರ ಜತೆಗೆ, ದೀರ್ಘಕಾಲದಿಂದ ಬಾಡಿಗೆ ಪಾವತಿಸದ ಮಳಿಗೆಗಳ ವಿರುದ್ಧ ಮುಂದಿನ ಹಂತದಲ್ಲಿ ತೆರವು ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ. ಬಾಡಿಗೆ ಪಾವತಿಸಿ ಮಳಿಗೆ ಮುಂದುವರಿಸಬೇಕು.ಇಲ್ಲವಾದರೆ ಮಳಿಗೆ ಖಾಲಿ ಮಾಡಬೇಕು ಎಂಬ ಸಂದೇಶವನ್ನು ಪಾಲಿಕೆ ನೀಡಿದೆ.
