LatestTop Storiesರಾಜ್ಯ-Karnataka

ಸತೀಶ್ ಜಾರಕಿಹೊಳಿ ವಿಚಾರದಲ್ಲಿ ಸ್ಟಿಂಗ್ ಆಪರೇಷನ್..!

ಬಾಗಲಕೋಟೆ.ಅ.9- ಸ್ಟಿಂಗ್ ಆಪರೇಷನ್ ಕುರಿತು ಕಾಂಗ್ರೆಸ್ ಸಚಿವರು ಹಾಗೂ ಶಾಸಕರನ್ನೇ ಕೇಳಬೇಕು. ಈ ಹಿಂದೆ ಸಚಿವ ಸತೀಶ್ ಜಾರಕಿಹೊಳಿ ವಿಚಾರದಲ್ಲಿ ಯಾರು ಸ್ಟಿಂಗ್ ಆಪರೇಷನ್ ನಡೆಸಿದರು, ಯಾರು ವಾದ ಮಂಡಿಸಿದರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಷಡ್ಯಂತ್ರ,ಕುತಂತ್ರ, ಪಿತೂರಿ, ಸ್ಟಿಂಗ್ ಆಪರೇಷನ್,ಪಿಂಗ್ ಆಪರೇಷನ್‌ಗಳ ಕೀರ್ತಿ ರಾಜ್ಯದ ಚುಕ್ಕಾಣಿ ಹಿಡಿದವರಿಗೆ ಸಲ್ಲುತ್ತದೆ ಎಂದು ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿ ಅವರನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ.ಕಳೆದ ಮೂರು ತಿಂಗಳಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು,ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಕಾಂಗ್ರೆಸ್ ಸರ್ಕಾರ ಉತ್ತರ ನೀಡುತ್ತಿಲ್ಲ. ಭೀಕರ ಬರಗಾಲದ ನಡುವೆಯೂ ರೈತರ ಸಮಸ್ಯೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರಜಾಸೇವೆ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಒದಗಿಸುತ್ತಿಲ್ಲ.ಅವರಿಗೆ ರಿಯಲ್ ಎಸ್ಟೇಟ್ ಮೇಲಿರುವ ಆಸಕ್ತಿ ರೈತರ ಮೇಲಿಲ್ಲ ಎಂದು ಟೀಕಿಸಿದರು.

ದೇಶದಲ್ಲಿ ಅಶಾಂತಿ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.ಕಾಕ್ರೋಚ್ ಪಾರ್ಟಿ ಮೂಲಕ ಬಾಂಗ್ಲಾದೇಶ ಹಾಗೂ ಶ್ರೀಲಂಕಾದ ರೀತಿಯಲ್ಲಿ ದೇಶದಲ್ಲಿ ದಂಗೆ ಎಬ್ಬಿಸುವುದು ಕಾಂಗ್ರೆಸ್‌ನ ತಂತ್ರವಾಗಿದೆ.ಇಂತಹ ಯಾವುದೇ ಪ್ರಯತ್ನಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವಕಾಶ ನೀಡುವುದಿಲ್ಲ ಎಂದರು.

Share with Friends
author avatar
Digital Desk