LatestTop Storiesಬೆಂಗಳೂರು-Bengaluruರಾಜ್ಯ-Karnataka

ರಾಜ್ಯ ಸರ್ಕಾರಕ್ಕೆ ಖಾಯಂ ದೃಢೀಕರಣ ಪತ್ರ ಕೊಡುವ ಹಕ್ಕಿದೆ : ಪ್ರಿಯಾಂಕ ಖರ್ಗೆ

ಬೆಂಗಳೂರು, ಜು. 10- ರಾಜ್ಯ ಸರ್ಕಾರಕ್ಕೆ ಖಾಯಂ ವಾಸ ದೃಢೀಕರಣ ಪ್ರಮಾಣ ಪತ್ರ ಕೊಡುವ ಹಕ್ಕಿದೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಿಯಮ ಮಾಡಲು ಆದೇಶ ಹೊರಡಿಸಲು ಅವಕಾಶವಿದೆ. ಶಾಸಕರು ಅಂದರೆ ಶಾಸನ ಮಾಡುವುದು. ಅದರಂತೆ ಶಾಸನ ಮಾಡಿ ಸರ್ಕಾರಿ ಆದೇಶವನ್ನು ಹೊರಡಿಸುತ್ತೇವೆ ಎಂದರು.

ಖಾಯಂ ನಿವಾಸ ಪ್ರಮಾಣ ಪತ್ರವನ್ನು ಸರ್ಕಾರದಿಂದ ಕೊಡುತ್ತಿದ್ದೇವೆ.ಕಾಂಗ್ರೆಸ್ ಪಕ್ಷದಿಂದ ಕೊಡುತ್ತಿಲ್ಲ. ಸರ್ಕಾರದ ವ್ಯವಸ್ಥೆಯಡಿಯಲ್ಲೇ ಖಾಯಂ ವಾಸ ಪ್ರಮಾಣ ಪತ್ರ ನೀಡುವ ಹಕ್ಕು ನಮಗಿದೆ ಎಂದು ಪ್ರತಿಪಾದಿಸಿದರು. ರಾಜ್ಯ ಸರ್ಕಾರ ಖಾಯಂ ವಾಸ ದೃಢೀಕರಣ ಪತ್ರ ನೀಡುತ್ತಿರುವುದರಿಂದ ಬಿಜೆಪಿ ನಾಯಕರಿಗೆ ಏನು ಸಮಸ್ಯೆಯಾಗುತ್ತಿದೆ.ಒಂದು ಕಡೆ ಎಸ್‌ಐಆರ್ ಮಾಸ್ಟರ್ ಸ್ಟ್ರೋಕ್ ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ. ಜೊತೆಗೆ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವುದು ಅಕ್ರಮ ನಡೆದಿದೆ ಎಂದು ದೂರು ಕೊಡುತ್ತೀರಾ ನಿಮಗೆ ಎಸ್‌ಐಆರ್ ಬೇಕಾ, ಬೇಡವಾ ನಿರ್ಧರಿಸಿ ಎಂದು ಪ್ರಿಯಾಂಕ ಖರ್ಗೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷಕ್ಕಂತೂ ಎಸ್‌ಐಆರ್ ಬೇಕು. ನಮ್ಮ ನಿಲುವು ಸ್ಪಷ್ಟವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಆಗಲೇಬೇಕು. ಎಲ್ಲವೂ ಪಾರದರ್ಶಕವಾಗಿ ಆಗಬೇಕು. ಲೋಪಗಳು, ನ್ಯೂನ್ಯತೆಗಳನ್ನು ಸರಿಪಡಿಸಬೇಕು. ಎಸ್‌ಐಆರ್‌ಗೆ ನಮ್ಮ ಸಂಪೂರ್ಣ ಸಹಕಾರ ಇದೆ. ಇದನ್ನು ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ನಾವೂ ಸಹ ಎಸ್‌ಐಆರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಹೀರಾತನ್ನು ಕೊಡುತ್ತಿದ್ದೇವೆ ಎಂದರು.

ನಾಗರಿಕತ್ವ ಪುರಾವೆಗೆ ಯಾವ ದಾಖಲೆ ಇದೆ. ಪಾಸ್‌ಪೋರ್ ಆಧಾರ್ ಕಾರ್ಡ್ ಯಾವುದ್ನು ಮಾನ್ಯ ಮಾಡಲ್ಲ ಎಂದು ಆಯೋಗ ಹೇಳುತ್ತದೆ. ಹೀಗಾದರೆ ಹೇಗೆ. ಆಯೋಗ ಬಿಜೆಪಿಯ ಕಪಿಮುಷ್ಠಿಯಲ್ಲಿದೆ. ಬಿಜೆಪಿಯನ್ನು ಗೆಲ್ಲಿಸಲು ಮತದಾರರಪಟ್ಟಿಯಲ್ಲಿ ಇಷ್ಟ ಬಂದಂತೆ ಹೆಸರುಗಳನ್ನು ತೆಗೆಯಲಾಗುತ್ತಿದೆ ಎಂದು ದೂರಿದರು.
ಚುನಾವಣಾ ಆಯೋಗ ಒಂದು ಸಾಂವಿಧಾನಕ ಸಂಸ್ಥೆ. ಆದರೆ ಆಯೋಗ ಅಸಂವಿಧಾನಿಕವಾಗಿ ನಡೆಯುತ್ತಿದೆ ಎಂದು ಪ್ರಿಯಾಂಕ ಖರ್ಗೆ ದೂರಿದರು.

ರಾಮ ಮಂದಿರ ನಿರ್ಮಾಣ, ಪ್ರಾಣ ಪ್ರತಿಷ್ಠಾಪನೆ ಎಲ್ಲದರಲ್ಲೂ ಕ್ರೆಡಿಟ್ ತೆಗೆದುಕೊಂಡAತಹ ಆರ್‌ಎಸ್‌ಎಸ್ ರಾಮಮಂದಿರ ದೇಣಿಗೆ ಕಳವು ಪ್ರಕರಣದಲ್ಲೂ ಗ್ರೇಡ್ ತೆಗೆದುಕೊಳ್ಳಲಿ ಎಂದರು. ಅಯ್ಯೋಧ್ಯ ರಾಮಮಂದಿರದ ಮುಖ್ಯಸ್ಥರು ವಿಹೆಚ್‌ಪಿಗೆ ಸೇರಿದವರು. ಈ ವಿಹೆಚ್‌ಪಿಯನ್ನು ಸ್ಥಾಪಿಸಿದವರೆ ಆರ್‌ಎಸ್‌ಎಸ್ ಮುಖಂಡರು. ಹೀಗಿರುವಾಗ ಕಳ್ಳತನದಲ್ಲೂ ಇವರಿಗೆ ಎಷ್ಟುಪಾಲು ಹೋಗಿದೆ ಎಲ್ಲವೂ ಬಹಿರಂಗ ಮಾಡಬೇಕು ಎಂದು ಪ್ರಿಯಾಂಕ ಖರ್ಗೆ ಒತ್ತಾಯಿಸಿದರು.

Share with Friends
author avatar
Digital Desk